ಸೌತ್ ಅಂಗಳದಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ಮಹಾನಟಿ ಕೀರ್ತಿ ಸುರೇಶ್ ಮದುವೆ ವಿಚಾರ. ಉದ್ಯಮಿ ಜೊತೆ ಹಸೆಮಣೆ ಏರೋದಕ್ಕೆ ನಟಿ ಕೀರ್ತಿ ರೆಡಿಯಾಗಿದ್ದಾರೆ.


ಗುರು ಹಿರಿಯರು ನಿಶ್ಚಯಿಸಿದ ವರನೊಂದಿಗೆ ಏಳು ಹೆಜ್ಜೆ ಇಡಲು ಕೀರ್ತಿ ಸುರೇಶ್ ಒಪ್ಪಿಗೆ ನೀಡಿದ್ದಾರಂತೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನಲಾಗಿದೆ. ಇನ್ನು ಕೀರ್ತಿ ಸುರೇಶ್ ಮದುವೆ ಆಗುತ್ತಿರುವುದು ಉದ್ಯಮಿಯೋರ್ವನಾಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ನಟಿಮಣಿಯರು ಲವ್ ಮ್ಯಾರೇಜ್ ಆಗೋದೆ ಹೆಚ್ಚು. ಆದರೆ, ಕೀರ್ತಿ ಸುರೇಶ್ ಮಾತ್ರ ಅರೇಂಜ್ ಮ್ಯಾರೇಜ್‌ಗೆ ಒಪ್ಪಿಗೆ ನೀಡಿದ್ದಾರೆ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಶೇರ್ ಮಾಡುತ್ತಿದ್ದಾರೆ. ಜತೆಗೆ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]

