ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈ ಮಧ್ಯೆ ತಲೈವಾ ರಾಜಕೀಯ ಎಂಟ್ರಿಯ ಕುರಿತು ಸಖತ್ ಸುದ್ದಿಯಾಗ್ತಿರುವ ಬೆನ್ನಲ್ಲೇ ರಾಜಕೀಯ ಅಖಾಡಕ್ಕೆ ಬರುವ ಕುರಿತು ಸ್ವತಃ ತಲೈವಾ ಸ್ಪಷ್ಟನೆ ನೀಡಿದ್ದಾರೆ.
71ರ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಆಕ್ಟೀವ್ ಇರುವ ಸೂಪರ್ ಸ್ಟಾರ್ ರಜನೀಕಾಂತ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಜತೆಗೆ ರಾಜಕೀಯ ರಂಗದಲ್ಲೂ ಭಾಗಿಯಾಗಲು ತಲೈವಾಗೆ ಬುಲಾವ್ ಬಂದಿದೆ. ರಜನೀಕಾಂತ್ ಮತ್ತೆ ರಾಜಕೀಯ ಅಖಾಡದಲ್ಲಿ ಆಕ್ಟೀವ್ ಆಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್ ರವಿ ಅವರನ್ನು ತಲೈವಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ಇನ್ನೊಂದು ವೀಡಿಯೋ ಇದೆ, ಯಾವಾಗ ಬಿಡುತ್ತಾನೋ ನನಗೆ ಗೊತ್ತಿಲ್ಲ: ಸೋನು ಗೌಡ
Advertisement
Advertisement
ರಾಜ್ಯಪಾಲರಾದ ಆರ್.ಎನ್ ರವಿ ಭೇಟಿಯಾದ ಬೆನ್ನಲ್ಲೇ ತಾವು ರಾಜಕೀಯ ಬರುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಪಕ್ಷ ಪ್ರಾರಂಭಿಸುವ ವಿಚಾರಕ್ಕೆ ಅಂತ್ಯ ಹಾಡಿದ್ದಾರೆ.