ಹೈದರಾಬಾದ್: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K. Chandrasekhar Rao) (ಕೆಸಿಆರ್) ಮತ್ತು ಅವರ ಪುತ್ರಿ ಹಾಗೂ ಟಿಆರ್‌ಎಸ್ (Telangana Rashtra Samithi) ಎಂಎಲ್‍ಸಿ ಕೆ.ಕವಿತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರು ಹೈದರಾಬಾದ್‍ನಲ್ಲಿಂದು (Hyderabad) ಬಿಜೆಪಿ ಸಂಸದರೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
Advertisement
ನಿಜಾಮಾಬಾದ್ (Nizamabad) ಕ್ಷೇತ್ರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ (Dharmapuri Arvind) ಅವರ ಬಂಜಾರಾ ಹಿಲ್ಸ್ ನಿವಾಸದ ಮೇಲೆ ಟಿಆರ್‌ಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಪೀಠೋಪಕರಣಗಳನ್ನು ಹಾನಿಗೊಳಿಸಿದ್ದಾರೆ. ಕವಿತಾ ಅವರು ಈ ಹಿಂದೆ ನಿಜಾಮಾಬಾದ್ ಸಂಸದರಾಗಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕವಿತ ಅವರನ್ನು ಅರವಿಂದ್ ಅವರು ಟಫ್ ಫೈಟ್ ನೀಡಿ ಸೋಲಿಸಿದ್ದರು.
Advertisement
Advertisement
ಗುರುವಾರ ಅರವಿಂದ್ ಅವರು ಸುದ್ದಿಗೋಷ್ಠಿ ವೇಳೆ, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅವರು ಪಕ್ಷವನ್ನು ಬದಲಾಯಿಸದಿದ್ದರೆ ಅವರ ಮೇಲೆ ಇಡಿ ಮೂಲಕ ದಾಳಿ ನಡೆಸಲಾಗುತ್ತದೆ ಎಂಬ ಬೆದರಿಕೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದನ್ನೂ ಓದಿ: ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ
Advertisement
ಈ ವರದಿ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿ ಕವಿತಾ ಅವರನ್ನು ಖರೀದಿ ಮಾಡಲಿದೆ ಎಂಬ ಸುದ್ದಿ ಹರಿದಾಡಲು ಪ್ರಾರಂಭವಾಗಿತ್ತು. ಸುದ್ದಿಗೋಷ್ಠಿಯಲ್ಲಿ ಕೆಸಿಆರ್ ಅವರನ್ನು “ಅತ್ಯಂತ ಮೂರ್ಖ ಮುಖ್ಯಮಂತ್ರಿ” ಎಂದು ಅರವಿಂದ್ ಟೀಕಿಸಿದ್ದರು.
ಅಕ್ಟೋಬರ್ 5 ರಂದು ಟಿಆರ್‌ಎಸ್ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಕವಿತಾ ಕೋಪಗೊಂಡಿದ್ದಾರೆ. ಅಸಮಾಧಾನಗೊಂಡ ಕವಿತಾ ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದೇನೆ ಎಂದು ತಂದೆಗೆ ಸಂದೇಶವನ್ನು ಕಳುಹಿಸಿದ್ದರು. ಈ ರಾಜಕೀಯ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್‍ನ ಹಿರಿಯ ಪದಾಧಿಕಾರಿಯೊಬ್ಬರಿಂದ ನಾನು ಮಾಹಿತಿ ಪಡೆದಿದ್ದೇನೆ ಎಂದು ಅರವಿಂದ್ ಸ್ಫೋಟಕ ಆರೋಪ ಮಾಡಿದ್ದರು. ಅರವಿಂದ್ ಅವರ ಈ ಹೇಳಿಕೆಯಿಂದಾಗಿ ಟಿಆರ್‌ಎಸ್ ಕಾರ್ಯಕರ್ತರು ಸಿಟ್ಟಾಗಿ ಇಂದು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬುಲೆಟ್ ಪ್ರಕಾಶ್ ಜೊತೆಗಿನ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟ ನಿರ್ದೇಶಕ ವಿಜಯ್ ಪ್ರಸಾದ್