DistrictsKarnatakaLatestMain PostMysuru

ಕವಲಂದೆ ಛೋಟಾ ಪಾಕಿಸ್ತಾನ ವೀಡಿಯೋ ವೈರಲ್ – ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ: ಎಸ್‍ಪಿ ಆರ್. ಚೇತನ್

ಬೆಂಗಳೂರು: ಕವಲಂದೆ ಭೋಲೆ ತೋ ಛೋಟಾ ಪಾಕಿಸ್ತಾನ ಎಂಬ ವೀಡಿಯೋ ವೈರಲ್ ವಿಚಾರವನ್ನು ಮೈಸೂರು ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ವೀಡಿಯೋ ಮಾಡಿದವರ ವಿಚಾರಣೆ ಆರಂಭಿಸಿದ್ದಾರೆ.

ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ಎಸ್‍ಪಿ ಆರ್. ಚೇತನ್ ಮಾಧ್ಯಮಗಳೊಂದಿಗೆ ಮಾತನಾಡಿ, ವೀಡಿಯೋ ಸಂಬಂಧ ಈಗಾಗಲೇ ದೂರು ದಾಖಲು ಮಾಡಿಕೊಳ್ಳಲಾಗಿದೆ. ಐಪಿಸಿ ಸಕ್ಷನ್ 153-A, 153-B, 505-2, ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜದ ಶಾಂತಿಗೆ ಭಂಗ ತರುವ ಹಾಗೂ ದೇಶದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ

ಈ ಕೃತ್ಯ ಕಾರಣ, ಉದ್ದೇಶ ಹಾಗೂ ಹಿನ್ನೆಲೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ವೀಡಿಯೋ ಕುರಿತು ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ. ವೀಡಿಯೋದಲ್ಲಿ ಇರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರಿಸಲಾದ ವೀಡಿಯೋಗಳನ್ನು ಸಹ ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಮಾತುಗಳನ್ನು ಆಡಿದ ವ್ಯಕ್ತಿಗಳ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ಏನಿದು ಪ್ರಕರಣ:
ಮೈಸೂರಿನ ಕಲವಂದೆ ಗ್ರಾಮದಲ್ಲಿ ಕಿಡಿಗೇಡಿಗಳು ಕವಲಂದೆ ಛೋಟಾ ಪಾಕಿಸ್ತಾನ ಎಂದು ಹೇಳಿಕೆ ನೀಡಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೋಡಗಿತ್ತು. ಕಳೆದ ಮಂಗಳವಾರ ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಮುಗಿಸಿ ಹೊರ ಬರುವ ವೇಳೆ ಕವಲಂದೆ ಭೋಲೆ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ ಎಂದು ವೀಡಿಯೋದಲ್ಲಿ ಹೇಳಿಕೆ ನೀಡಿದ್ದ.  ಆ ಬಳಿಕ ಈ ವೀಡಿಯೋ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿತ್ತು. ಇದೀಗ ಈ ವೀಡಿಯೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ವಿಟ್ಲದಲ್ಲಿ ಅಪ್ರಾಪ್ತೆ ಆತ್ಮಹತ್ಯೆ – ಇದು ಕೊಲೆ, ಲವ್‌ ಜಿಹಾದ್‌ ಎಂದ ವಿಎಚ್‌ಪಿ

 

 

Leave a Reply

Your email address will not be published.

Back to top button