ಮಂಗಳೂರು: ಪಿಸ್ತಾ ಸಿಪ್ಪೆ (Pistachio Peel) ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಬಳಿ ನಡೆದಿದೆ.
ಎರಡೂವರೆ ವರ್ಷದ ಅನಸ್ ಮೃತ ಬಾಲಕ. ಕಾಸರಗೋಡು (Kasaragod) ಜಿಲ್ಲೆಯ ಕುಂಬಳೆಯ ಭಾಸ್ಕರನಗರ ನಿವಾಸಿ ಅನ್ವರ್, ಮಹರೂಫಾ ದಂಪತಿಯ ಪುತ್ರ ಅನಸ್ ಪಿಸ್ತಾ ತಿನ್ನುತ್ತಿದ್ದ ವೇಳೆ ಪಿಸ್ತಾದ ಸಿಪ್ಪೆಯನ್ನೂ ತಿಂದಿದ್ದ.
ಆ ಸಂದರ್ಭದಲ್ಲಿ ಪೋಷಕರು ಸಿಪ್ಪೆಯನ್ನು ಬಾಯಿಂದ ಹೊರ ತೆಗೆದಿದ್ದರು. ಬಳಿಕ ತಕ್ಷಣವೇ ಉಪ್ಪಳದ ಆಸ್ಪತ್ರೆಗೆ ಪೋಷಕರು ಅನಾಸ್‌ನನ್ನು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಗಂಟಲಿನಲ್ಲಿ ಯಾವುದೇ ವಸ್ತು ಇಲ್ಲ ಎಂದು ತಿಳಿಸಿದ್ದರು. ಆ ಕಾರಣಕ್ಕೆ ಮಗುವನ್ನು ಮನೆಗೆ ಕರೆತರಲಾಗಿತ್ತು.
ಮನೆಗೆ ಬಂದ ನಂತರ ಮತ್ತೆ ಅನಾಸ್‌ಗೆ ಉಸಿರಾಟದ ತೊಂದರೆ ಕಾಣಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಅನಾಸ್ ಮೃತಪಟ್ಟಿದ್ದಾನೆ.