ಬಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಸೆಕ್ಸ್, ಡಿವೋರ್ಸ್ ಎಲ್ಲಾ ಕಾಮನ್ ಆಗಿದೆ. ಟಾಲಿವುಡ್ನ ಸ್ಟಾರ್ ನಟಿ ಸಮಂತಾ, ನಿಹಾರಿಕಾ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ಕೊಟ್ಟಿದ್ದರು. ಈಗ ತೆಲುಗಿನ ನಟಿ ಸ್ವಾತಿ ರೆಡ್ಡಿ(Swathi Reddy), ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿಯಿದೆ. ಇವರು ಕೂಡ ಸಮಂತಾ(Samantha), ನಿಹಾರಿಕಾ(Niharika) ಹಾಗೆಯೇ ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಟಾಲಿವುಡ್ನಲ್ಲಿ ಫುಲ್ ಟಾಕ್ ಆಗುತ್ತಿದೆ.
Advertisement
2015ರಲ್ಲಿ ‘ಡೆಂಜರ್’ (Danger) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸ್ವಾತಿ ರೆಡ್ಡಿ (Swathi Reddy) ಅವರು ಸಾಲು ಸಾಲಾಗಿ ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ರು. ಕಾರ್ತಿಕೇಯ, ತ್ರಿಪುರ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ನಟಿ ನೀಡಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ವಿಕಾಸ್ ವಾಸು (Vikas Vasu) ಜೊತೆ ಸ್ವಾತಿ ರೆಡ್ಡಿ ಮದುವೆಯಾದರು. ಪ್ರೀತಿಸಿದ ಹುಡುಗ ವಿಕಾಸ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.
Advertisement
Advertisement
ಸಮಂತಾ, ನಿಹಾರಿಕಾ ಡಿವೋರ್ಸ್ ಪ್ಯಾಟರ್ನ್ ಅಂತೆಯೇ ಸ್ವಾತಿ ರೆಡ್ಡಿ ಹಾಗೇ ಮಾಡ್ತಿದ್ದಾರೆ. ಸ್ಯಾಮ್ ಮತ್ತು ನಿಹಾರಿಕಾ ದಾರಿಯನ್ನೇ ಸ್ವಾತಿ ರೆಡ್ಡಿ ಕೂಡ ಹಿಡಿದ್ರಾ ಎಂಬ ಅನುಮಾನ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪತಿ ವಿಕಾಸ್ ಜೊತೆಗಿನ ಫೋಟೋವನ್ನ ನಟಿ ಡಿಲೀಟ್ ಮಾಡಿದ್ದಾರೆ. ಸಮಂತಾ- ನಿಹಾರಿಕಾ ಕೂಡ ಹೀಗೆ ಮಾಡಿದ್ದರು. ಕೆಲ ತಿಂಗಳುಗಳ ನಂತರ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ:ಸುದೀಪ್-ಕುಮಾರ್ ವಿವಾದ: ಇಂದು ರವಿಚಂದ್ರನ್ ಎಂಟ್ರಿ
Advertisement
ಅವರಂತೆಯೇ ಸ್ವಾತಿ ಮಾಡಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಪತಿ ಜೊತೆಗಿನ ಫೋಟೋವನ್ನ ಸ್ವಾತಿ ಡಿಲೀಟ್ ಮಾಡಿರೋ ಬೆನ್ನಲ್ಲೇ ಡಿವೋರ್ಸ್ (Divorce) ಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಅಷ್ಟಕ್ಕೂ ಇದು ನಿಜಾನಾ? ಎಂಬುದನ್ನ ನಟಿ ರಿಯಾಕ್ಟ್ ಮಾಡುವವರೆಗೂ ಕಾಯಬೇಕಿದೆ.