ಬೆಂಗಳೂರು: ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ (Bike Taxi) ಬಾಡಿಗೆ ಯೋಜನೆ ರದ್ದುಗೊಳಿಸಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ (Bengaluru) ಎಲೆಕ್ಟ್ರಿಕ್ ಬೈಕ್, ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸಿದ್ದರಿಂದ ಓಲಾ, ಉಬರ್, ರ‍್ಯಾಪಿಡೋಗಳಿಗೆ ತೀವ್ರ ಹಿನ್ನಡೆಯಾಗಿದೆ. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?
Advertisement
Advertisement
ಸಾರ್ವಜನಿಕ ಸಾರಿಗೆಗಾಗಿ ಹಾಗೂ ಸ್ವಯಂ ಉದ್ಯೋಗಾವಕಾಶ ಕೊಡುವ ಉದ್ದೇಶದಿಂದ 2021 ರಲ್ಲಿ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿ ಮಾಡಲಾಗಿತ್ತು. ಈಗಾಗಲೇ ಓಲಾ, ಉಬರ್, ರ‍್ಯಾಪಿಡೋದಿಂದ ಬೈಕ್ ಸೇವೆ ಇತ್ತು.
Advertisement
Advertisement
ಆದರೆ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದ್ವಿಚಕ್ರ ವಾಹನ ಸಾರಿಗೆ ಸೇವೆ ರದ್ದು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಮಹಿಳೆಯರಿಗೂ ಅಸುರಕ್ಷತೆಯ ದೃಷ್ಟಿಯಿಂದ ಈ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ