ಮುಂಗಾರು ಕೊಂಚ ಚುರುಕುಗೊಂಡಿದ್ದು, ಮುಂದಿನ ಒಂದು ವಾರದ ಕಾಲ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 22 ಹಾಗೂ 23ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಹಾವೇರಿ, ಹಾಸನ, ಕೊಡಗು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 23ಕ್ಕೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 28-24
ಶಿವಮೊಗ್ಗ: 29-23
ಬೆಳಗಾವಿ: 28-22
ಮೈಸೂರು: 29-22

ಮಂಡ್ಯ: 30-22
ಮಡಿಕೇರಿ: 25-21
ರಾಮನಗರ: 29-22
ಹಾಸನ: 27-21
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 29-21

ಕೋಲಾರ: 29-22
ತುಮಕೂರು: 29-22
ಉಡುಪಿ: 28-24
ಕಾರವಾರ: 28-27
ಚಿಕ್ಕಮಗಳೂರು: 25-19
ದಾವಣಗೆರೆ: 31-23

ಹುಬ್ಬಳ್ಳಿ: 31-23
ಚಿತ್ರದುರ್ಗ: 31-23
ಹಾವೇರಿ: 31-23
ಬಳ್ಳಾರಿ: 34-25
ಗದಗ: 33-23
ಕೊಪ್ಪಳ: 33-24

ರಾಯಚೂರು: 36-26
ಯಾದಗಿರಿ: 36-26
ವಿಜಯಪುರ: 34-24
ಕಲಬುರಗಿ: 36-25
ಬಾಗಲಕೋಟೆ: 33-24
