ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯಾದ್ಯಂತ ಬಿರುಗಾಳಿ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಬಲವಾದ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ `ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 29-26
ಶಿವಮೊಗ್ಗ: 27-23
ಬೆಳಗಾವಿ: 27-22
ಮೈಸೂರು: 29-22

ಮಂಡ್ಯ: 29-22
ಮಡಿಕೇರಿ: 23-21
ರಾಮನಗರ: 29-22
ಹಾಸನ: 26-21
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 28-21

ಕೋಲಾರ: 29-21
ತುಮಕೂರು: 28-21
ಉಡುಪಿ: 30-26
ಕಾರವಾರ: 29-27
ಚಿಕ್ಕಮಗಳೂರು: 23-19

ದಾವಣಗೆರೆ: 29-23
ಹುಬ್ಬಳ್ಳಿ: 28-23
ಚಿತ್ರದುರ್ಗ: 29-22
ಹಾವೇರಿ: 28-23
ಬಳ್ಳಾರಿ: 32-24
ಗದಗ: 29-22
ಕೊಪ್ಪಳ: 32-23

ರಾಯಚೂರು: 33-25
ಯಾದಗಿರಿ: 33-25
ವಿಜಯಪುರ: 32-24
ಕಲಬುರಗಿ: 32-24
ಬಾಗಲಕೋಟೆ: 31-23

