ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 2 ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಗಾರು ಪ್ರಭಾವದ ಹಿನ್ನೆಲೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕೆಲ ಏರಿಯಾಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇನ್ನೂ 5 ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 27-24
ಶಿವಮೊಗ್ಗ: 24-21
ಬೆಳಗಾವಿ: 24-21
ಮೈಸೂರು: 25-20
ಮಂಡ್ಯ: 26-21
Advertisement
ಕೊಡಗು: 21-17
ರಾಮನಗರ: 26-20
ಹಾಸನ: 23-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 24-19
ಕೋಲಾರ: 25-21
ತುಮಕೂರು: 25-20
ಉಡುಪಿ: 27-24
ಕಾರವಾರ: 28-25
ಚಿಕ್ಕಮಗಳೂರು: 22-18
ದಾವಣಗೆರೆ: 26-21
ಚಿತ್ರದುರ್ಗ: 24-21
ಹಾವೇರಿ: 26-21
ಬಳ್ಳಾರಿ: 29-23
ಗದಗ: 26-21
ಕೊಪ್ಪಳ: 28-22
ರಾಯಚೂರು: 31-23
ಯಾದಗಿರಿ: 30-23
ವಿಜಯಪುರ: 28-22
ಬೀದರ್: 27-21
ಕಲಬುರಗಿ: 29-23
ಬಾಗಲಕೋಟೆ: 28-22