ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತುಸು ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 28-24
ಶಿವಮೊಗ್ಗ: 27-22
ಬೆಳಗಾವಿ: 25-22
ಮೈಸೂರು: 28-22
ಮಂಡ್ಯ: 29-22
ಮಡಿಕೇರಿ: 23-20
ರಾಮನಗರ: 28-22
ಹಾಸನ: 25-21
ಚಾಮರಾಜನಗರ: 27-22
ಚಿಕ್ಕಬಳ್ಳಾಪುರ: 28-22

ಕೋಲಾರ: 29-22
ತುಮಕೂರು: 27-22
ಉಡುಪಿ: 27-24
ಕಾರವಾರ: 27-26
ಚಿಕ್ಕಮಗಳೂರು: 23-19
ದಾವಣಗೆರೆ: 28-23
ಹುಬ್ಬಳ್ಳಿ: 27-22
ಚಿತ್ರದುರ್ಗ: 28-22
ಹಾವೇರಿ: 27-23
ಬಳ್ಳಾರಿ: 31-24
ಗದಗ: 27-22
ಕೊಪ್ಪಳ:29-24

ರಾಯಚೂರು: 31-25
ಯಾದಗಿರಿ: 31-25
ವಿಜಯಪುರ: 31-24
ಕಲಬುರಗಿ: 31-24
ಬಾಗಲಕೋಟೆ: 29-24
