ಬೆಂಗಳೂರು: ಏಳನೇ ತರಗತಿ ಕನ್ನಡ ಪಠ್ಯದಲ್ಲಿ Textbook) ಸಾವಿತ್ರಿಬಾಯಿ ಫುಲೆ (Savitribai Phule) ಪಠ್ಯ ಇದೆ. ಕೈ ಬಿಟ್ಟಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಟ್ವೀಟ್ ಮೂಲಕ ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.
Advertisement
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿಬಾಯಿ ಫುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ ಬೊಮ್ಮಾಯಿ (Basavaraj Bommai) ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಬಿ.ಸಿ ನಾಗೇಶ್, ಸಾವಿತ್ರಿಬಾಯಿ ಫುಲೆ ಪಠ್ಯ ಕೈ ಬಿಟ್ಟಿಲ್ಲ. ಏಳನೇ ತರಗತಿ ಕನ್ನಡ ಪಠ್ಯದಲ್ಲಿ ಸಾವಿತ್ರಿ ಬಾಯಿ ಫುಲೆ ಪಠ್ಯ ಇದೆ. ಕಾಂಗ್ರೆಸ್ ಸುಳ್ಳು ಹಬ್ಬಿಸೋದು ಕೆಲಸ ಆಗಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ. ಸತ್ಯ ಕಣ್ಣ ಮುಂದಿರುವಾಗ ನಿಮ್ಮ ಹಸಿ ಸುಳ್ಳುಗಳನ್ನು ಜನರು ನಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು
Advertisement
ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ !
ಸತ್ಯ ಕಣ್ಣ ಮುಂದಿರುವಾಗ ನಿಮ್ಮ ಹಸಿ ಸುಳ್ಳುಗಳನ್ನು ಜನರು ನಂಬಲು ಸಾಧ್ಯವಿಲ್ಲ.@BSBommai@BJP4Karnataka https://t.co/9HAHPkWXZc pic.twitter.com/kemPqiLhC4
— B.C Nagesh (@BCNagesh_bjp) September 9, 2022
Advertisement
ಇದೀಗ ಕಾಂಗ್ರೆಸ್ ಸುಳ್ಳು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದೆ. ಕಾಂಗ್ರೆಸ್, ಸಾವಿತ್ರಿಬಾಯಿ ಫುಲೆ ಪಠ್ಯವನ್ನು ಕೈ ಬಿಟ್ಟಿತ್ತು ಎಂದು ಕಿಡಿಕಾರಿತ್ತು. ಆದ್ರೆ ಅಸಲಿಗೆ ಸಾವಿತ್ರಿಬಾಯಿ ಫುಲೆ ಪಠ್ಯವನ್ನು ಸರ್ಕಾರ ಕೈ ಬಿಟಿಲ್ಲ. 7ನೇ ತರಗತಿ ಕನ್ನಡ ಪಠ್ಯದಲ್ಲಿ ರಮಾನಂದ ಆಚಾರ್ಯ ರಚಿತ ಪಠ್ಯ ಇದ್ದು, ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ ಪಠ್ಯ ಇದೆ. ಹೀಗಿದ್ರು ಕಾಂಗ್ರೆಸ್ ಸುಳ್ಳು ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಟ್ವೀಟ್‍ಗೆ ದಾಖಲೆ ಸಮೇತ ಪಠ್ಯ ಬಿಡುಗಡೆ ಮಾಡಿ ಬಿ.ಸಿ ನಾಗೇಶ್ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ರೂಮಿನಲ್ಲಿದ್ದ ಯುವತಿಯಿಂದಲೇ ಜಗನ್ನಾಥ ಶೆಟ್ಟಿಗೆ ಖೆಡ್ಡಾ