– ನಾನು ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ ಎಂದ ಮುಸುಕುಧಾರಿ ಮಹಿಳೆ
ಬೆಂಗಳೂರು: ಸ್ಟಿಂಗ್ ಆಪರೇಷನ್ (Sting Operation) ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸ್ಟಿಂಗ್ನಲ್ಲಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿರುವ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆನ್ನಲಾಗಿದೆ. ಸ್ಟಿಂಗ್ನಲ್ಲಿ ಮುಸುಕು ಹಾಕಿ ಮಾತನಾಡಿದ್ದ ಮಹಿಳೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲೂ ಸ್ಟಿಂಗ್ ಆಪರೇಷನ್ ಆಗಿವೆ, ಸಿಡಿ ಯಾವಾಗ ಬರುತ್ತೆ ನೋಡಬೇಕು: ಯತ್ನಾಳ್ ಬಾಂಬ್
ಆ ಮುಸುಕುಧಾರಿ ಮಹಿಳೆಯಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಮಹಿಳೆಯ ಹೇಳಿಕೆಯಿಂದಲೇ ಇಡೀ ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ. ಒತ್ತಡ ಹಾಕಿ ಆ ಮಹಿಳೆಯಿಂದ 2023ರಲ್ಲಿ ಹೇಳಿಕೆ ಕೊಡಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.
ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಹಿಳೆ ಕ್ಲೀನ್ಚಿಟ್ ಕೊಟ್ಟಿದ್ದಾರೆ. ‘ಸಿದ್ದರಾಮಯ್ಯ ನನಗೆ ತೊಂದರೆ ಕೊಟ್ಟಿಲ್ಲ. ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ’ ಎಂದು ಮಹಿಳೆ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ರಾಜಕೀಯ ಗುರು: ಶಿವಲಿಂಗೇಗೌಡ
ಇದರಿಂದ ವೀಡಿಯೊ ಮಾಡಿದವರ ಅಣತಿಯಂತೆ ಸ್ಟಿಂಗ್ ನಡೆದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಅವರು ಹೇಳಿದಂತೆ ನಾನು ಹೇಳಿದ್ದೇನೆ. ಕೆಲವರು ಷಡ್ಯಂತ್ರದಿಂದ ಹೇಳಿಕೆ ಪಡೆದಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.
