ಬೆಂಗಳೂರು: ರಾಜಧಾನಿ ಸೇರಿ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಕಳೆದ ರಾತ್ರಿ ಬೆಂಗಳೂರಿನಲ್ಲಿ (Bengaluru) ಕನಿಷ್ಠ ತಾಪಮಾನ (Weather) 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಕಳೆದ 10 ವರ್ಷಗಳಲ್ಲಿಯೇ ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ (Bengaluru Meteorological Department) ತಿಳಿಸಿದೆ.
Advertisement
ಬಿಸಿಲು ಮೈತಾಕುವುದೇ ಕಡಿಮೆಯಾಗಿದ್ದು, ಚಳಿಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಜನ ಚಳಿಗಾಲದ ಉಡುಪುಗಳ ಮೊರೆ ಹೋಗ್ತಿದ್ದಾರೆ. ಚುಮುಚುಮು ಚಳಿ ಜೊತೆಗೆ ಹಗುರ ಮಳೆ ಬೀಳುವ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ 4 ವರ್ಷ ಬಜೆಟ್ ಮಂಡಿಸುವಾಗ ನಾನು ಅದರ ಹಿನ್ನೆಲೆ ಗಾಯಕನಾಗಿದ್ದೆ: ಸಿಎಂ ಇಬ್ರಾಹಿಂ
Advertisement
Advertisement
ಬೆಂಗಳೂರಿನಲ್ಲಿಂದು ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಇನ್ನೂ ಎರಡು ದಿನ ಚಳಿ ಹೆಚ್ಚಾಗಲಿದೆ. ನಗರದೆಲ್ಲೆಡೆ ಬೆಳಗ್ಗಿನಜಾವ ದಟ್ಟ ಮಂಜು ಆವರಿಸಿದೆ. ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್
Advertisement
ಚಳಿಯ ನಡುವೆ ಇಂದಿನಿಂದ ಮೂರು ದಿನ ಮಳೆ ಕಾಟ ಇರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣದಿಂದಾಗಿ ನವೆಂಬರ್ 22 ರಿಂದ 24ರ ವರೆಗೆ ಮಳೆಯಾಗುವ ಮುನ್ಸೂಚನೆಯಿದೆ. ಕರಾವಳಿ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.