ಬೆಂಗಳೂರು: ದೆಹಲಿಯಲ್ಲಿ ಮೂರುದಿನ ಮೂರು ದಿನ ಇದ್ದರೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ರಾಹುಲ್ ಗಾಂಧಿ (Rahul Gandhi) ಭೇಟಿಯಾಗದಿರುವ ಬಗ್ಗೆ ನಾನಾ ರೆಕ್ಕೆಪುಕ್ಕದ ಮಾತುಗಳು ಹರಿದಾಡುತ್ತಿದೆ. ಆದರೆ ಮೂರು ದಿನದ ಡೆಲ್ಲಿ ಟೂರ್‌ನಲ್ಲಿ ಏನಾಯ್ತು ಎಂಬ ಬಗ್ಗೆ ಪಬ್ಲಿಕ್ ಟಿವಿಗೆ ಇನ್‌ಸೈಡ್ ಮಾಹಿತಿ ಸಿಕ್ಕಿದೆ.
ಹೌದು. ರಾಹುಲ್ ಭೇಟಿ ಆಗದಿದ್ದರೂ ಡಿಕೆಶಿಯಿಂದ ಚೆಕ್ ಮೇಟ್ ಆಟ ಡೆಲ್ಲಿಯಲ್ಲಿ ನಡೆದಿದೆ. ದೆಹಲಿ ಬಾರ್ಡರ್ ಮತ್ತು ನೋಯ್ಡಾ ಬಾರ್ಡರ್ ಗೆ ಎರಡು ಸಲ ರಹಸ್ಯವಾಗಿ ತೆರಳಿದ್ದ ಡಿಕೆಶಿ, ಪವರ್ ಫುಲ್ ನಾಯಕರೊಬ್ಬರ ಹತ್ತರಿ ತ್ಯಾಗ ನೆನಪಿಸಿ ಪವರ್ ಶೇರ್ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಕೆಲವರಿಗೆ ಅಧಿಕಾರ ಮಾತ್ರ ಬೇಕು, ಅದಕ್ಕೆ ನಾವು ಏನು ಮಾಡೋದು: ಡಿಕೆಶಿ ಮಾರ್ಮಿಕ ಮಾತು
ಆ ನಾಯಕರನ್ನು ಭೇಟಿಯಾದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿಯಾಗಿ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಾಗ ಕೆಲ ದಿನಗಳ ಕಾಲ ಕಾಯುವಂತೆ ಸೂಚಿಸಿದ್ದಾರೆ.
ಡಿಕೆಶಿ ಸಹೋದರರಿಗೆ ಡಿಸೆಂಬರ್ ಡಿಸೈಡ್ ಸುಳಿವು ಸಿಕ್ಕಿದ್ದು, ಸಂಸತ್ತಿನ ಅಧಿವೇಶನದ ವೇಳೆಯೇ ನಿರ್ಧಾರ ಮಾಡಿ ಎಂಬ ಪ್ರಸ್ತಾಪವೂ ಆಗಿದೆ ಎನ್ನುವುದು ಮೂಲಗಳ ಮಾಹಿತಿ.

