ಬೆಂಗಳೂರು: ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಬೆಂಗಳೂರಿನಲ್ಲಿಯೇ 165 ಓಮಿಕ್ರಾನ್ ಕೇಸ್‍ಗಳು ದಾಖಲಾಗಿದೆ.
ದಿನೇ ದಿನೇ ರಾಜ್ಯ ರಾಜಧಾನಿಯಲ್ಲಿ ಓಮಿಕ್ರಾನ್ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕಂಡುಬಂದ ಓಮಿಕ್ರಾನ್ ಸೋಂಕಿತರಲ್ಲಿ ಬಹುಪಾಲು ಬೆಂಗಳೂರಿನಲ್ಲೆ ಪತ್ತೆಯಾಗಿದೆ.
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು 165 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ತಡೆಯಲು ನಿಗಾ ವಹಿಸಿ: ಕೆ.ಎಸ್.ಈಶ್ವರಪ್ಪ
Advertisement
165 new cases of Omicron are confirmed today in Bengaluru taking the overall tally in the State to 931.#Omicron #COVID
— Dr Sudhakar K (@mla_sudhakar) January 23, 2022
Advertisement
ರಾಜ್ಯದಲ್ಲಿ ಒಟ್ಟು 931 ಕೇಸ್ ಓಮಿಕ್ರಾನ್ ಕೇಸ್‍ಗಳು ಪತ್ತೆಯಾಗಿದೆ. ಆದರೆ ಬೆಂಗಳೂರು ಒಂದರಲ್ಲೆ 880 ಕೇಸ್‍ಗಳು ದಾಖಲಾಗಿವೆ. ಉಳಿದ 51 ಓಮಿಕ್ರಾನ್ ಕೇಸ್ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಂಡುಬಂದಿವೆ. ಇದನ್ನೂ ಓದಿ: ಮಾಯಾವತಿ ಪ್ರಚಾರದಲ್ಲಿ ಸಕ್ರಿಯವಾಗಿಲ್ಲ ಯಾಕೆ – ಆಶ್ಚರ್ಯವಾಗ್ತಿದೆ ಎಂದ ಪ್ರಿಯಾಂಕಾ