ಬೆಂಗಳೂರು: ಮದ್ಯಪ್ರಿಯರಿಗೆ ಬಿಗ್ ಶಾಕ್. ಬಜೆಟ್‌ಗೆ (Karnataka) ಮೊದಲೇ ಮದ್ಯದ ದರ (Alcohol Price) ಏರಿಕೆಯಾಗಿದೆ. 10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಸಾಧಾರಣವಾಗಿ ಬಜೆಟ್‌ನಲ್ಲಿ (Budjet) ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಯಾಗುವ ಮೊದಲೇ ದರ ಏರಿಕೆಯಾಗಿದೆ.
Advertisement
ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಸಿದೆ.
Advertisement
Advertisement
ಪಬ್ಲಿಕ್ ಟಿವಿ ಜನವರಿ 9 ರಂದೇ ಮದ್ಯದ ದರ ಏರಿಕೆಯಾಗಲಿದೆ ಎಂದು ವರದಿ ಮಾಡಿತ್ತು. ಈ ವರದಿ ಈಗ ನಿಜವಾಗಿದೆ.
Advertisement
ಯಾವ ಬ್ರಾಂಡ್ ಬೀಯರ್ ದರ ಎಷ್ಟು ಏರಿಕೆ?
ಆವರಣದ ಒಳಗಡೆ ನೀಡಿರುವುದು ಹಳೆ ದರ
ಲೆಜೆಂಡ್ – 145(100)
ಪವರ್ ಕೂಲ್ -155(130)
ಬ್ಲ್ಯಾಕ್ ಫೋರ್ಟ್ -160(145)
ಹಂಟರ್ -190 (180)
ವುಡ್‌ಪೆಕರ್ ಕ್ರೆಸ್ಟ್ – 250(240)
ವುಡ್‌ಪೆಕರ್ ಗ್ಲೈಡ್ -240(230)