Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಸರ್ಕಾರ ಆದೇಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಸರ್ಕಾರ ಆದೇಶ

Bengaluru City

ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಸರ್ಕಾರ ಆದೇಶ

Public TV
Last updated: June 25, 2025 5:32 pm
Public TV
Share
2 Min Read
Vidhana Soudha
SHARE

– ಕನ್ನಡದಲ್ಲಿ ಬರುವ ಅರ್ಜಿ, ಪತ್ರಗಳಿಗೆ ಕನ್ನಡದಲ್ಲೇ ಉತ್ತರಿಸಿ.. ನಾಮಫಲಕ ಕನ್ನಡದಲ್ಲೇ ಪ್ರದರ್ಶಿಸಿ ಎಂದು ಸೂಚನೆ

ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕಡ್ಡಾಯವಾಗಿ ಕನ್ನಡ (Kannada) ಬಳಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರಬೇಕೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ತಿಳಿಸಲಾಗಿದೆ. ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ಸರ್ಕಾರಿ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ

Siddaramaiah 8

ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸಬೇಕು. ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಇತರ ಎಲ್ಲಾ ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಲು ಸ್ಪಷ್ಟ ಸೂಚನೆ ನೀಡಿದ್ದಾರೆ.

ಕಚೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡಬೇಕು. ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರಬೇಕು. ಸಭಾ ಸೂಚನೆ, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ ಹಾಗೂ ನಡಾವಳಿಗಳನ್ನು ಕನ್ನಡದಲ್ಲಿ ತಯಾರಿಸಿರಬೇಕು. ಈ ಮೂಲಕ ಸರ್ಕಾರದ ಭಾಷಾ ನೀತಿಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?

ಕೇಂದ್ರ ಸರ್ಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ತಾಕೀತು ಮಾಡಿದ್ದಾರೆ.

ಸರ್ಕಾರಿ ಪತ್ರ ವ್ಯವಹಾರಗಳಲ್ಲಿ ಕಡತದ ಟಿಪ್ಪಣಿಗಳು ಕನ್ನಡದಲ್ಲಿಲ್ಲದ ಬಗ್ಗೆ ಗಮನಿಸಿದ್ದ ಸಿಎಂ ಗರಂ ಆಗಿದ್ದರು. ಕಡತದಲ್ಲಿನ ಟಿಪ್ಪಣಿ ಮತ್ತು ಪತ್ರ ವ್ಯವಹಾರಗಳು ಕನ್ನಡದಲ್ಲಿ ಬಾರದಿದ್ದ ಪಕ್ಷದಲ್ಲಿ ಅಂತಹ ಕಡತಗಳನ್ನು ಹಿಂದಿರುಗಿಸಿ ಸೂಕ್ತ ಸಮಜಾಯಿಷಿ ಪಡೆಯಲು ಸಿಎಂ ನಿರ್ದೇಶನ ಕೊಟ್ಟಿದ್ದರು. ಸರ್ಕಾರ/ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳ/ವಿಶ್ವವಿದ್ಯಾಲಯಗಳ/ ಅನುದಾನಿತ ಸಂಘ-ಸಂಸ್ಥೆಗಳ ಎಲ್ಲಾ ಅಧಿಕಾರಿ/ನೌಕರರು ಕಟ್ಟುನಿಟ್ಟಾಗಿ ಕನ್ನಡ ಬಳಕೆ ಜಾರಿಗೊಳಿಸಬೇಕು ಸೂಚನೆ ನೀಡಿದ್ದರು. ಹೀಗಾಗಿ, ಈ ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದೆ.

TAGGED:bengalurukannadaKarnataka govtಕನ್ನಡಕರ್ನಾಟಕ ಸರ್ಕಾರಬೆಂಗಳೂರು
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Israel Iran airstrikes
Latest

ಇಸ್ರೇಲ್‌ ಏರ್‌ಸ್ಪೇಸ್‌ ಬಂದ್‌; ಏರ್‌ ಇಂಡಿಯಾ, ಇಂಡಿಗೋ ವಿಮಾನಗಳು ತುರ್ತು ಯೂ-ಟರ್ನ್‌

Public TV
By Public TV
8 minutes ago
West Bengal Pink Booth SHINING Patrol
Latest

ಚುನಾವಣೆ ಹೊತ್ತಲ್ಲೇ ಮಹಿಳಾ ಸುರಕ್ಷತೆಗೆ ಒತ್ತು – ಪ.ಬಂಗಾಳದಲ್ಲಿ ಪಿಂಕ್ ಬೂತ್, ಶೈನಿಂಗ್ ಹೆಸರಿನ ಮಹಿಳಾ ಗಸ್ತು ತಂಡಗಳ ಸ್ಥಾಪನೆ

Public TV
By Public TV
12 minutes ago
Bahrain 2
Latest

ಸೌದಿ, ಯುಎಇ, ಕತಾರ್‌ ಮೇಲೂ ಇರಾನ್‌ ಆಕ್ರಮಣ – ಗಲ್ಫ್‌ ರಾಷ್ಟ್ರಗಳಲ್ಲಿ ಎಷ್ಟು ಭಾರತೀಯರಿದ್ದಾರೆ?

Public TV
By Public TV
13 minutes ago
Iran Israel Strike
Latest

ಇರಾನ್ ಪ್ರತಿದಾಳಿ – ಇಸ್ರೇಲ್‌ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿ ಬಿಡುಗಡೆ

Public TV
By Public TV
33 minutes ago
Bahrain
Latest

Iran-Israel War | ಅಮೆರಿಕದ ನೌಕಾ ನೆಲೆಯ ಮೇಲೆ ಇರಾನ್‌ ಬ್ಯಾಲಿಸ್ಟಿಕ್ ಮಿಸೈಲ್‌ ದಾಳಿ

Public TV
By Public TV
58 minutes ago
donald trump 2
Latest

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಇಲ್ಲವೇ ಸಾವನ್ನು ಎದುರಿಸಿ: ಇರಾನ್‌ ಸೈನಿಕರಿಗೆ ಟ್ರಂಪ್‌ ವಾರ್ನಿಂಗ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?