ಬೆಂಗಳೂರು: ಮಾ. 1ರಿಂದ ಸರ್ಕಾರಿ ನೌಕರರು (Government Employees) ಮುಷ್ಕರ (Indefinite Strike) ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರ ನೀಡಿದ್ದಾರೆ.
ಸಿಎಂ ಬೊಮ್ಮಾಯಿ (CM Basavaraj Bommai) ವಿಧಾನಸಭೆಯಲ್ಲಿ ಮಾತನಾಡುತ್ತಾ, ಏಳನೇ ವೇತನ ಆಯೋಗ (7th Pay Commission) ನೀಡುವ ಮಧ್ಯಂತರ ವರದಿ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡುವುದಾಗಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯನ್ನು ಸರ್ಕಾರಿ ನೌಕರರು ನಂಬುವ ಸ್ಥಿತಿಯಲ್ಲಿ ಇಲ್ಲ. ಅಧಿಕೃತ ಆದೇಶಕ್ಕೆ ಪಟ್ಟು ಹಿಡಿದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ನಿಗದಿಯಂತೆ ಮಾರ್ಚ್ ಒಂದರಿಂದ ಮುಷ್ಕರ ಆರಂಭಿಸಲು ಮುಂದಾಗಿದೆ.
Advertisement
Advertisement
ಇಂದು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ನಿಗಮ,ಪ್ರಾಧಿಕಾರ ಸೇರಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಈಗಾಗಲೇ ಒಂಭತ್ತು ತಿಂಗಳು ತಡವಾಗಿದೆ. ನಮ್ಮ ಬೇಡಿಕೆ ಈಡೇರಲೇ ಬೇಕು.. ಅಲ್ಲಿಯವರೆಗೂ ವಿರಮಿಸಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸ್ಪಷ್ಟಪಡಿಸಿದೆ.
Advertisement
ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದಂತೆಯೇ ಮಾಡಿದರೆ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ. ರಾಜ್ಯದ ಜನ ನಾನಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈಗ ಸರ್ಕಾರದ ಬಳಿ ಒಂದೇ ದಿನದ ಸಮಯ ಉಳಿದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ
Advertisement
ಯಾವ ಯಾವ ಇಲಾಖೆ ಬಂದ್?
* ವಿಧಾನಸೌಧದ ಎಲ್ಲಾ ಕಚೇರಿ
* ಸಚಿವಾಲಯದ ಎಲ್ಲಾ ಕಚೇರಿ
* ಬಿಬಿಎಂಪಿ/ಪುರಸಭೆ/ನಗರಸಭೆ
* ಡಿಸಿ ಕಚೇರಿ/ತಾಲೂಕು ಕಚೇರಿ
* ಗ್ರಾಮ ಪಂಚಾಯಿತಿ
* ಸರ್ಕಾರಿ ಶಾಲೆ-ಕಾಲೇಜು, ಹಾಸ್ಟೆಲ್
* ಕಂದಾಯ ಇಲಾಖೆ
* ಜಲಮಂಡಳಿ