ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ, ಎಸ್‌ಟಿ ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ನೀಡುವ ಸಂಬಂಧ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಹಿಂಪಡೆದಿದೆ. ಆದರೆ ಯಾವ ಕಾರಣಕ್ಕೆ ಆದೇಶ ವಾಪಸ್ ಪಡೆಯಲಾಗಿದೆ ಎಂಬ ಬಗ್ಗೆ ಸ್ಪಷ್ಟ ಕಾರಣ ನೀಡಿಲ್ಲ. ಇದನ್ನೂ ಓದಿ: 2A ಮೀಸಲಾತಿ ಹೋರಾಟಕ್ಕೆ ಬೆಂಬಲ – ಲಿಂಗಾಯತ ಶಾಸಕರು ಸಿಎಂ ಮೇಲೆ ಒತ್ತಡ ತರ್ತೀವಿ ಎಂದ ಕತ್ತಿ
Advertisement
Advertisement
ಗೃಹ ಬಳಕೆಗೆ 75 ಯುನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಆಗಸ್ಟ್ 28 ರಂದು ಇಂಧನ ಇಲಾಖೆ ಆದೇಶ ಹೊರಡಿಸಿತ್ತು. SC, ST ಕುಟುಂಬಗಳಿಗೆ ಮೊದಲ 75 ಯುನಿಟ್ ವಿದ್ಯುತ್ ಉಚಿತ ಒದಗಿಸಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಿತ್ತು.
Advertisement
Advertisement
ಆದರೆ ಆದೇಶ ಹೊರಡಿಸಿ 10 ದಿನಗಳಲ್ಲಿ ಸರ್ಕಾರ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಇದನ್ನೂ ಓದಿ: ಡಿಸಿಪಿ ಕಾರಿನ ಮೇಲೆ ಬಿತ್ತು ಬೃಹತ್ ಕೊಂಬೆ