ಬೆಂಗಳೂರು: ಕೆಳಹಂತದ ಪೊಲೀಸರ ಸ್ವಾತಂತ್ರ್ಯ ಕಸಿಯಲು ಸರ್ಕಾರ ಮುಂದಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ (Police Department) ಶಿಸ್ತು ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆ.
ಕೆಳಹಂತದ ಪೊಲೀಸರು ಇನ್ನು ಮುಂದೆ ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಹಾಗೆ ಇಲ್ಲ. IPS ಅಧಿಕಾರಿಗಳ ನಿರ್ಧಾರವೇ ಇನ್ಮುಂದೆ ಗೃಹ ಇಲಾಖೆಯಲ್ಲಿ ಅಂತಿಮವಾಗಲಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸುಧಾಕರ್
Advertisement
Advertisement
ಈ ಸಂಬಂಧ ಈಗಾಗಲೇ ಗೃಹ ಇಲಾಖೆ ಕರಡು ಪ್ರಕಟಿಸಿದೆ. ಆ ಮೂಲಕ IPS ಅಧಿಕಾರಿಗಳ ತೀರ್ಮಾನದ ವಿರುದ್ದ ಕೆಳಹಂತದ ಅಧಿಕಾರಿಗಳು ಮೇಲ್ಮನವಿ ಸಲ್ಲಿಸುವ ಅವಕಾಶಕ್ಕೆ ಕೊಕ್ಕೆ ಹಾಕಲು ಸರ್ಕಾರ ಮುಂದಾಗಿದೆ. ಕರಡಿಗೆ ಆಕ್ಷೇಪಣೆ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ.
Advertisement
ಹೊಸ ನಿಯಮದ ಪ್ರಕಾರ PSI, SI, ASI, ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ವರ್ಗದ ಮೇಲೆ ಭ್ರಷ್ಟಾಚಾರ, ಅಶಿಸ್ತು ಇನ್ನಿತರ ಆರೋಪ ಕೇಳಿ ಬಂದಾಗ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ. ಹಿರಿಯ ಅಧಿಕಾರಿಗಳು ದಂಡ, ಮುಂಬಡ್ತಿ ತಡೆ ಹಿಡಿಯುವ ಶಿಕ್ಷೆ ನೀಡುತ್ತಾರೆ. ಹಿರಿಯ ಅಧಿಕಾರಿಗಳ ಈ ತೀರ್ಪಿನ ವಿರುದ್ಧ ಇಷ್ಟು ದಿನ ಮೇಲ್ಮನವಿ ಹೋಗಲು ಅವಕಾಶ ಇತ್ತು. ಈ ಅವಕಾಶವನ್ನ ಕೈಬಿಟ್ಟು, ಹಿರಿಯ ಅಧಿಕಾರಿಗಳ ತೀರ್ಪಿನ ವಿರುದ್ದ ಮೇಲ್ಮನವಿ ಹೋಗಲು ಅವಕಾಶ ರದ್ದು ಮಾಡುವ ನಿಯಮ ಜಾರಿಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ದೂರು ನೀಡಲು ಹೋದವರ ಮೇಲೆಯೇ ಪೊಲೀಸರ ದೌರ್ಜನ್ಯ?
Advertisement
ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಗಲ್ಲು ಶಿಕ್ಷೆ ಆದವರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಪೊಲೀಸರಿಗೆ ಚಿಕ್ಕ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲವಾ? ಅಪರಾಧಿಗಿಂತ ಪೊಲೀಸ್ ಇಲಾಖೆ ಕೆಳಹಂತದ ಅಧಿಕಾರಿಗಳು ಸರ್ಕಾರದ ಮಟ್ಟಿಗೆ ಕೀಳಾದ್ರಾ? IPS ಅಧಿಕಾರಿಗಳೇ ಇಲಾಖೆ ನಡೆಸುತ್ತಿದ್ದಾರಾ ಎಂಬ ಆಕ್ರೋಶ ವ್ಯಕ್ತವಾಗಿದೆ.