ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಗೆ ಮತ್ತೆ ನಸೀಬು ಕೈಹಿಡಿಡಿದೆ. ಮಿನಿಸ್ಟರ್‍ಗಳ ವಿರುದ್ಧವೇ ಕೀಳು ಮಟ್ಟದ ಹೇಳಿಕೆ ಕೊಟ್ರೂ ಅದನ್ನೆಲ್ಲ ಹೈಕಮಾಂಡ್ ಮತ್ತೆ ಮಾಫಿ ಮಾಡಿದೆ.
ಕಳೆದ ವಾರ ಕೇಂದ್ರದ ಶಿಸ್ತು ಸಮಿತಿ ಶೋಕಾಸ್ ನೊಟೀಸ್ ಕೊಟ್ಟು ದೆಹಲಿಗೆ ಬರುವಂತೆ ಯತ್ನಾಳ್‍ಗೆ ಸೂಚಿಸಿದ್ದರ ಬೆನ್ನಲ್ಲೆ ಸೀಕ್ರೆಟ್ ಆಗಿ ಯತ್ನಾಳ್ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಯತ್ನಾಳ್‍ಗೆ ಹೈಕಮಾಂಡ್ (BJP HighCommand) ಕೇವಲ ವಾರ್ನಿಂಗ್ ಕೊಟ್ಟಿದೆಯಂತೆ. ಚುನಾವಣೆ ಹೊತ್ತಲ್ಲಿ ಯಾರ ವಿರುದ್ಧವೂ ಮಾತಾಡಬಾರದು, ಪಕ್ಷದ ಶಿಸ್ತು ಮೀರದೇ ಹದ್ದು ಬಸ್ತಿನಲ್ಲಿರುವಂತೆ ತಾಕೀತು ಮಾಡಿ ಕಳುಹಿದ್ದಾರಂತೆ. ಆದರೆ ಈ ಜಸ್ಟ್ ವಾರ್ನಿಂಗ್ ಕಾರಣ ಯತ್ನಾಳ್‍ಗೆ ಪಂಚಮಸಾಲಿ (Panchamasali) ಸಮುದಾಯದ ಸಪೋರ್ಟ್.
ಒಂದು ವೇಳೆ ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಂದಾದರೆ ಪಂಚಮಸಾಲಿಗಳ ಮೀಸಲಾತಿ ಹೋರಾಟ ತೀವ್ರವಾಗಬಹುದು. ಪಂಚಮಸಾಲಿ ಸಮುದಾಯ, ಮಠಾಧೀಶರು ಪಕ್ಷದ ವಿರುದ್ಧ ತಿರುಗಿ ಬೀಳಬಹುದು, ಹೀಗಾಗಿ ಮತ್ತೆ ಹೊಸ ತಲೆನೋವು ಬೇಡ ಅಂತ ಹೈಕಮಾಂಡ್ ಈ ರೀತಿ ಮಾಡಿರಬಹುದು ಎನ್ನಲಾಗ್ತಿದೆ. ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ: ಯತ್ನಾಳ್
ಆದರೆ ಹೈಕಮಾಂಡ್ ನಡೆಯಿಂದ ನಿರಾಣಿ ಬ್ರದರ್ಸ್ ವಲಯದಲ್ಲಿ ಬೇಸರ ಉಂಟಾಗಿದೆ. ಹಾಗಾಗಿ ಇದೀಗ ತಾವೇ ಯತ್ನಾಳ್ ವಿರುದ್ಧ ಖೆಡ್ಡಾ ತೋಡಲು ಸ್ಕೆಚ್ ಹಾಕಿದ್ದಾರೆ ಎನ್ನಲಾಗ್ತಿದ್ದು, ವಿಜಯಪುರದಲ್ಲಿ ಯತ್ನಾಳ್ ಗೆ ರಾಜಕೀಯವಾಗಿ ಮುಳುಗಿಸಲು ಒಳಗೊಳಗೇ ಪ್ಲಾನ್ ನಡೆದಿದ್ಯಂತೆ. ಯತ್ನಾಳ್ ವರ್ಸಸ್ ನಿರಾಣಿ (Murugesh Nirani) ಸಂಘರ್ಷ ಇಷ್ಟೊಕ್ಕೆ ಮುಗಿಯಲ್ವಾ ಅನ್ನೋದೆ ಕುತೂಹಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k