ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯಲ್ಲಿ (BJP) ಭರ್ಜರಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಬಿಜೆಪಿಗೆ ಈ ಬಾರಿ ಹಳೇ ಮೈಸೂರು (Mysuru) ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ದೊಡ್ಡ ಸವಾಲು. ವೀಕ್ ಇರುವ 2 ಭಾಗಗಳಲ್ಲೂ ಟಾರ್ಗೆಟ್ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದೆ.
ಈ ಪ್ಲ್ಯಾನ್‍ನ ಭಾಗವಾಗಿಯೇ ಮೈಸೂರು ಕರ್ನಾಟಕಕ್ಕೆ (Karnataka) ಚಾಣಕ್ಯ ಅಮಿತ್ ಶಾ (Amit Shah) ಗೆಲ್ಲುವ ಸೂತ್ರ ಹೆಣೆದಿದ್ದಾರೆ. ಇತ್ತ ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಫಾರ್ಮುಲಾ ರೂಪಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸೀಟ್ ಗೆಲ್ಲಲು ಅಮಿತ್ ಶಾ ಅವರು ಕಳೆದ ತಿಂಗಳು ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಿದ್ದರು. ಹಳೇ ಮೈಸೂರು ಭಾಗದಲ್ಲಿ ಗೆಲ್ಲುವುದಕ್ಕೆ, ಪಕ್ಷದ ಬಲವರ್ಧನೆಗೆ ಪಕ್ಕಾ ರೂಟ್‍ಮ್ಯಾಪ್ ಹಾಕಿ, ಒಂದಷ್ಟು ಟಾಸ್ಕ್‌ಗಳನ್ನು ಅಮಿತ್ ಶಾ ಕೊಟ್ಟು ಹೋಗಿದ್ದರು.
Advertisement
Advertisement
ಇನ್ನು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುರುವಾರದಿಂದ ಮೋದಿ ಅಬ್ಬರ ಪ್ರಾರಂಭವಾಗಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದು, ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಕಲ್ಯಾಣ ಭಾಗದಲ್ಲಿ ಕೊಂಚ ದುರ್ಬಲ ಇರುವ ಬಿಜೆಪಿಯನ್ನು ಸ್ಟ್ರಾಂಗ್ ಮಾಡಲು ಮೋದಿ ಮೋಡಿ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಪಡೆ ಇದೆ. ಕಲ್ಯಾಣ ಭಾಗದಿಂದಲೇ ಕಲ್ಯಾಣ ಪರ್ವಕ್ಕೆ ಮೋದಿ ನಾಂದಿ ಹಾಡ್ತಾರೆ ಎಂದು ನಿರೀಕ್ಷಿಸಲಾಗಿದೆ.
Advertisement
ಕಲಬುರಗಿಯಲ್ಲಿ 52 ಸಾವಿರ ಬಂಜಾರ ಸಮುದಾಯದವರಿಗೆ ಹಕ್ಕು ಪತ್ರ ಕೊಡುವ ಮೂಲಕ ಬಿಜೆಪಿಗೆ ಆ ಸಮುದಾಯದ ಒಲವು ಸಿಗೋದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಯಾದಗಿರಿಯಲ್ಲಿ ನಾರಾಯಣಪುರದ ಬಸವ ಜಲಸಾಗರ ಡ್ಯಾಂಗೆ ಸ್ಕಾಡಾ ತಂತ್ರಜ್ಞಾನ ಅಲಕವಡಿಕೆಗೆ ಮೋದಿಯವರು ನೀರಾವರಿ ವಲಯಕ್ಕೆ ಬಿಜೆಪಿಯು ಹೆಚ್ಚಿನ ಆದ್ಯತೆ ಕೊಟ್ಟಿದೆ ಎಂಬ ಸಂದೇಶ ಸಾರಲಿದ್ದಾರೆ. ಇದರ ಮೂಲಕ ಆ ಭಾಗದ ರೈತರ ಒಲವು ಗಳಿಸಲು ಬಿಜೆಪಿ ಕಸರತ್ತು ನಡೆಸಿದೆ.
Advertisement
ಮೈಸೂರು ಭಾಗದಲ್ಲಿ ಏನು?: ಜೆಡಿಎಸ್ ಕೋಟೆಗಳನ್ನು ಗೆಲ್ಲುವುದಕ್ಕೆ ತಳಮಟ್ಟದ ಸ್ಟ್ರಾಟರ್ಜಿ ಮಾಡಲಾಗಿದೆ. ಕಾಂಗ್ರೆಸ್-ಜೆಡಿಎಸ್‍ನ ಪ್ರಭಾವಿಗಳಿಗೆ ಚುನಾವಣಾ ಪೂರ್ವ ಗಾಳ, ಜೆಡಿಎಸ್ ಜತೆ ನೋ ಅಡ್ಜಸ್ಟ್‌ಮೆಂಟ್, ಓನ್ಲಿ ಪೊಲಿಟಿಕಲ್ ವಿರೋಧ, ಜಾತಿ ಸಮೀಕರಣ ಮೂಲಕ ಮತ ಸೆಳೆಯಲು ತಂತ್ರಗಾರಿಕೆ ಹಾಗೂ ಹಿಂದುತ್ವ+ ಅಭಿವೃದ್ಧಿ ಅಜೆಂಡಾಗಳ ಪ್ರಯೋಗ ಮಾಡುವುದು. ಜತೆಗೆ ಬಿಜೆಪಿ ಭವಿಷ್ಯಕ್ಕೆ ಈಗಿಂದಲೇ ಸ್ಥಳೀಯ ನಾಯಕತ್ವ ಬೆಳೆಸುವ ತಂತ್ರ ಹೂಡಲಾಗಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?
ಕಲ್ಯಾಣ ಕರ್ನಾಟಕದಲ್ಲಿ ಏನು?: ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಗುರಿಯಾಗಿಸಿ ಪಕ್ಷ ಸಂಘಟನೆ, ಡಬಲ್ ಇಂಜಿನ್ ಸರ್ಕಾರಗಳ ಕೊಡುಗೆಗಳನ್ನು ಜನರಿಗೆ ಮನವರಿಕೆ, ವಿವಿಧ ಜಾತಿಗಳ ಸಮಾವೇಶ, ಆ ಮೂಲಕ ಸಮುದಾಯವಾರು ಟಾರ್ಗೆಟ್ ಮಾಡುವುದು. ರೈತರು, ಹಿಂದುಳಿದ, ಪರಿಶಿಷ್ಟ ವರ್ಗಗಳನ್ನು ಸೆಳೆಯುವ ಗುರಿಯನ್ನು ಹೊಂಡಿದೆ. ಬೃಹತ್ ರೋಡ್ ಶೋ, ರ್ಯಾಲಿ, ಪ್ರಚಾರ ಸಭೆಗಳ ಆಯೋಜನೆ, ಕಲ್ಯಾಣ ಭಾಗದಲ್ಲಿ ಕಾಂಗ್ರೆಸ್‍ನ ದೌರ್ಬಲ್ಯಗಳನ್ನು ಅಸ್ತ್ರ ಮಾಡಿಕೊಳ್ಳುವುದು, ಅಭಿವೃದ್ಧಿ ಮಂತ್ರದ ಮೂಲಕ ಎಲೆಕ್ಷನ್ ಗೆಲ್ಲಲು ನಿರ್ಧಾರ ಮಾಡಿದೆ. ಇದನ್ನೂ ಓದಿ: ಕಾರ್ಯನಿರ್ವಹಿಸುವ ಸಾಮರ್ಥ್ಯ ನಾನು ಹೊಂದಿಲ್ಲ – ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k