ಹಾಸನ: ಚುನಾವಣೆ (Election) ಹೊತ್ತಲ್ಲಿಯೇ ದಳಪತಿಗಳಿಗೆ ಸ್ವಪಕ್ಷೀಯರಿಂದ ಶಾಕ್ ಎದುರಾಗಿದೆ. ಹಾಸನದ 6 ಶಾಸಕರ ಪೈಕಿ, ಇಬ್ಬರು ಶಾಸಕರು ಪಕ್ಷಾಂತರ ಮಾಡೋದು ದೃಢವಾಗಿದೆ. ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ (A T Ramaswamy) ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಈಗ ಪಕ್ಷಾಂತರದ ಲಿಸ್ಟ್ ನಲ್ಲಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸುಳಿವು ಕೊಟ್ಟಿದ್ದಾರೆ.
Advertisement
ಕಳೆದ ಕೆಲ ತಿಂಗಳಿಂದ ಎ.ಟಿ. ರಾಮಸ್ವಾಮಿ ಹಾಗೂ ಶಿವಲಿಂಗೇಗೌಡ (Shivalinge Gowda) ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದು, ಬಹುತೇಕ ಕಾಂಗ್ರೆಸ್ ಸೇರೋ ಸಾಧ್ಯತೆಗಳಿವೆ. ಈಗಾಗಲೇ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿರೋ ಮಾಜಿ ಸಚಿವ ಎ. ಮಂಜುಗೆ ಅರಕಲಗೂಡಿನಿಂದ ಕಣಕ್ಕಿಳಿಸೋದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅರಸೀಕೆರೆಯಲ್ಲೂ ಸೂಕ್ತ ಅಭ್ಯರ್ಥಿ ಇರೋದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
Advertisement
Advertisement
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಮೊದಲ ಪಟ್ಟಿ ಪ್ರಕಟಿಸಿದ್ದರೂ, ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರೋ ಹಾಸನದ 7 ಟಿಕೆಟ್ ಇನ್ನೂ ಸಸ್ಪೆನ್ಸ್ ಆಗಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಸನದ ಟಿಕೆಟ್ ಆಕಾಂಕ್ಷಿಯಾಗಿರೋದ್ರಿಂದ ಈ ಬಾರಿಯ ಟಿಕೆಟ್ ಹಂಚಿಕೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ಇದರ ಮಧ್ಯೆ, ರೇವಣ್ಣ ಕ್ಷೇತ್ರ ಬದಲಾವಣೆ ಬಗ್ಗೆ ವದಂತಿ ಹರಿದಾಡತೊಡಗಿದೆ. ಇದನ್ನೂ ಓದಿ: ಮೋದಿ ನಂ.1 ಜಾಗತಿಕ ನಾಯಕ- ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ಪ್ರಧಾನಿ ಪರ 78% ಜನಾಭಿಪ್ರಾಯ
Advertisement
ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋಕೆ ಜೆಡಿಎಸ್ ಮುಂದಾಗಿದ್ದು, ಹೊಳೆ ನರಸೀಪುರದ ಬದಲು ರೇವಣ್ಣ, ಕೆ.ಆರ್. ಪೇಟೆಯಿಂದ ಸ್ಪರ್ಧಿಸುತ್ತಾರೆ ಅನ್ನೋ ಸುದ್ದಿ ಹರಡಿದೆ. ಪತ್ನಿ ಭವಾನಿ ರೇವಣ್ಣಗೆ ಹೊಳೆನರಸೀಪುರ ಬಿಟ್ಟು ಕೊಡಲಿದ್ದು, ಕುಮಾರಸ್ವಾಮಿ ಘೋಷಿಸಿದಂತೆ ಹಾಸನದಿಂದ ಸ್ವರೂಪ್ ಕಣಕ್ಕಿಳಿಯುತ್ತಾರೆ ಅನ್ನೋ ಊಹಾಪೋಹದ ಸುದ್ದಿ ಹರಿದಾಡಿದೆ. ಇದಕ್ಕೆ ಠಕ್ಕರ್ ಕೊಟ್ಟಿರೋ ಸಚಿವ ನಾರಾಯಣಗೌಡ, ಕೆ.ಆರ್. ಪೇಟೆ ಕ್ಷೇತ್ರದಿಂದ ರೇವಣ್ಣ ಏಕೆ?, ಎಚ್.ಡಿ. ದೇವೇಗೌಡ (H D Devegowda) ರು ಅಥವಾ ಕುಮಾರಸ್ವಾಮಿಯೇ ಸ್ಪರ್ಧಿಸಲಿ ಅಂತ ತಿರುಗೇಟು ನೀಡಿದ್ದಾರೆ.
ಚುನಾವಣೆ ಹೊತ್ತಲ್ಲಿ ಮತದಾರರನ್ನು ಓಲೈಸಲು ರಾಜಕಾರಣಿಗಳು ಟಿವಿ, ಮಿಕ್ಸಿ, ಸ್ಯಾರಿ, ಹಾಟ್‍ಬಾಕ್ಸ್ ಹೀಗೆ ಗಿಫ್ಟ್ ಗಳನ್ನು ಕೊಡ್ತಾರೆ. ಅದೇ ರೀತಿ ಈಗ ಮಂಡ್ಯದಲ್ಲೂ ಉಡುಗೊರೆ ರಾಜಕೀಯ ಶುರುವಾಗಿದೆ. ಕಳೆದ ಬಾರಿಯ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಚಿವ ನಾರಾಯಣಗೌಡ ರಾಜಕೀಯ ಇತಿಹಾಸದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಅಲೆ- 4 ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ: ನಳಿನ್ ಕುಮಾರ್ ಕಟೀಲ್
ಈ ಮೂಲಕ ಜೆಡಿಎಸ್‍ಗೆ ಮಾಸ್ಟರ್ ಸ್ಟ್ರೋಕ್ ನೀಡಿ, ಜೆಡಿಎಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ ಇಡಲು ನಾರಾಯಣಗೌಡ ಕಾರಣವಾಗಿದ್ರು. ಆದರೆ ಇದೀಗ ಕೆ.ಆರ್‍ಪೇಟೆಯನ್ನು ಬಿಜೆಪಿಗೆ ಖಾಯಂ ಕ್ಷೇತ್ರ ಮಾಡಲು ಕ್ಷೇತ್ರದಲ್ಲಿ ಈಗಿನಿಂದಲೇ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಗ್ರಾಮ ಪಂಚಾಯತಿಯ ಮುಖಂಡರನ್ನು ಸೆಳೆಯುವ ಉದ್ದೇಶದಿಂದ ನಾರಾಯಣಗೌಡ (Narayana Gowda) ಎಲ್‍ಇಡಿ ಟಿವಿಯನ್ನು ಗಿಫ್ಟ್ ರೀತಿ ಕೊಟ್ಟು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಒಟ್ಟಾರೆ ದಿನ ಕಳೆದಂತೆ ಮಂಡ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಕೆ.ಆರ್.ಪೇಟೆಯನ್ನು ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲು ಮುಂದಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k