ಮಂಡ್ಯ: ಇವರ ಕುಟುಂಬದವರು ಎಲ್ಲಾ ಕಡೆ ಸ್ಪರ್ಧೆ ಮಾಡುತ್ತಿದ್ದಾರೆ. ಅವರೆಲ್ಲಾ ದ್ವೇಷದಿಂದ ಸ್ಪರ್ಧೆ ಮಾಡುತ್ತಿದ್ದಾರಾ? ಅಥವಾ ವಿರೋಧ ಪಕ್ಷದವರ ಮೇಲೆ ಪ್ರೀತಿಯಿದ್ದು ಅವರು ಗೆಲ್ಲಲಿ ಎಂದು ನಿಂತುಕೊಂಡಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.
ನಮ್ಮ ಕುಟುಂಬ ಸುಮಲತಾ ಅವರಿಗೆ ಏನು ಅನ್ಯಾಯ ಮಾಡಿದೆ ಎಂಬ ಕುಮಾರಸ್ವಾಮಿ (H.D.Kumaraswamy) ಹೇಳಿಕೆ ಕುರಿತು ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಚುನಾವಣೆಯಲ್ಲಿ (Election) ಒಬ್ಬರ ವಿರುದ್ಧವಾಗಿ ಸ್ಫರ್ಧೆ ಮಾಡಿದರೆ ಅದು ದ್ವೇಷ ಎಂದು ಅರ್ಥನಾ? ಚುನಾವಣೆ ಎಂದಮೇಲೆ ಅದು ಸ್ಪರ್ಧೆ. ಅದರಲ್ಲಿ ನಿಮಗೂ ಹಕ್ಕಿದೆ, ನನಗೂ ಹಕ್ಕಿದೆ ಎಂದರು. ಇದನ್ನೂ ಓದಿ: ದಿಢೀರ್ ಬೆಳವಣಿಗೆ – ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ
Advertisement
Advertisement
ಚುನಾವಣೆ ಎಂದರೆ ಭಾರತ-ಪಾಕಿಸ್ತಾನದ ರೀತಿ ನಾವು ಶತ್ರುಗಳು ಎಂದು ಅರ್ಥ ಅಲ್ಲ. ನಾವು ಒಂದೇ ಸ್ಪರ್ಧೆಯಲ್ಲಿ ವಿರೋಧಿಗಳು ಅಷ್ಟೇ. ಅದನ್ನು ಅವರು ನನ್ನ ಮೇಲೆ ದ್ವೇಷವಿದೆ, ನನ್ನ ಪಕ್ಷದ ಮೇಲೆ ದ್ವೇಷವಿದೆ ಎಂದು ಹೇಳುವುದು ವಿಚಿತ್ರ. ಯಾಕೆಂದರೆ ಅವರದ್ದು ಬರೀ ಕುಟುಂಬ ರಾಜಕಾರಣ. ನಮ್ಮನ್ನು ಯಾರೂ ಎಲ್ಲಿಯೂ ವಿರೋಧಿಸಬಾರದು ಎನ್ನುವ ಮನೋಭಾವನೆ ಅವರದ್ದು. ಚುನಾವಣೆ ಅಂದಮೇಲೆ ಅವರ ಮಗನೇ ಆಗಲಿ, ಅವರೇ ಆಗಲಿ ಅಥವಾ ಅವರ ಶ್ರೀಮತಿಯೇ ಆಗಲಿ ಯಾರೇ ಬಂದರೂ ವಿರೋಧ ಮಾಡುವವರು ಇದ್ದೇ ಇರುತ್ತಾರೆ. ಇಲ್ಲಿಯವರೆಗೆ ಏನಾಗಿದೆ ಎಂದರೆ ರಾಜಕಾರಣದಲ್ಲಿ (Politics) ಯಾವ ಅಭ್ಯರ್ಥಿಗಳೂ ಅವರನ್ನು ಎದುರಿಸಿ ನಿಲ್ಲುತ್ತಿರಲಿಲ್ಲ. ಈಗ ಅದು ಆಗುತ್ತಿದೆ ಎಂಬ ವಿಷಯವನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು
Advertisement
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ (Ashok Jayaram) ಅವರಿಗೆ 20 ವರ್ಷಗಳಿಂದ ಜೆಡಿಎಸ್ (JDS) ಪಕ್ಷದಿಂದ ಅನ್ಯಾಯವಾಗುತ್ತಾ ಬಂದಿದೆ. ಎಸ್.ಡಿ ಜಯರಾಮ್ ಅಂತಹ ನಾಯಕರು ಜೆಡಿಎಸ್ ಪಕ್ಷವನ್ನು ಬೆಳೆಸಿದಂತಹ ನಾಯಕರು. ಅವರ ಕುಟುಂಬಕ್ಕೆ ಮೊದಲಿನಿಂದಲೂ ಅನ್ಯಾಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ : ಮೊಯಿದ್ದಿನ್ ಬಾವಾ ಆರೋಪ
Advertisement
ಜೆಡಿಎಸ್ ಅಶೋಕ್ ಜಯರಾಮ್ ಅವರ ಭವಿಷ್ಯವನ್ನೇ ಹಾಳು ಮಾಡಿದೆ. ಅವರ ಕುಟುಂಬದ ಪರವಾಗಿ ನಾವು ನಿಂತುಕೊಳ್ಳಬೇಕು. ಅಂತಹ ಕೆಲಸವನ್ನು ನಾವು ಮಾಡಬಾರದು. ಅಶೋಕ್ ಜಯರಾಮ್ ಅವರನ್ನು ನಿಲ್ಲಿಸಿ ಗೆಲ್ಲಿಸಬಹುದು ಎಂಬ ವಿಶ್ವಾಸ ನಮಗಿದೆ. ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಿ ಬಂದರೂ ಅಶೋಕ್ ಅವರನ್ನು ಗೆಲ್ಲಿಸುವ ತಾಕತ್ತು ನಮಗಿದೆ ಎಂದರು. ಇದನ್ನೂ ಓದಿ: ಏ.28ಕ್ಕೆ ಕೋಲಾರಕ್ಕೆ ಮೋದಿ – 1 ವಾರ 20+ ಸಮಾವೇಶದಲ್ಲಿ ಭಾಗಿ
ನಾಮಪತ್ರ ಸಲ್ಲಿಸದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅದು ವದಂತಿ ಅಷ್ಟೇ. ಆದರೆ ಪಕ್ಷದಲ್ಲಿ ಆ ರೀತಿಯಾದ ಚರ್ಚೆಗಳು ನಡೆದಿತ್ತು. ಜನತಾ ದಳದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾದರೆ ನೀವು ನಿಲ್ಲಬೇಕು ಎಂದು ಹೈಕಮಾಂಡ್ ಸಹ ಸೂಚಿಸಿತ್ತು. ನಮ್ಮಲ್ಲಿ ಸಮರ್ಥರಾದ ಅಭ್ಯರ್ಥಿ ಇದ್ದಾರೆ. ಅವರಿಗೆ ಶಕ್ತಿಯನ್ನು ತುಂಬಿಸಿ ಬಳಸಬೇಕಾಗಿದೆ. ನಾನು ನಾಮಪತ್ರ ಸಲ್ಲಿಸಲು ಕಾಲಾವಕಾಶ ಕೇಳಿದ್ದೇನೆ ಎಂಬ ಅನುಮಾನಗಳಿದ್ದಲ್ಲಿ ಡಿಸಿ ಕಚೇರಿಯಲ್ಲಿ ವಿಚಾರಿಸಿಕೊಳ್ಳಲಿ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ
ಕುಮಾರಸ್ವಾಮಿ ಅಭ್ಯರ್ಥಿಯಾದರೆ ನೀವು ಸ್ಪರ್ಧೆ ಮಾಡುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಎಲ್ಲರೂ ನೀವೇ ಬನ್ನಿ ಎಂದು ಕೇಳುತ್ತಿದ್ದರು. ನನಗೆ ಅದರ ಅಗತ್ಯವಿಲ್ಲ. ನಾವು ಏನು ಎಂಬುದನ್ನು ಈ ಚುನಾವಣೆಯಲ್ಲಿ ನಿರೂಪಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ : ಈಶ್ವರಪ್ಪ