ಚಾಮರಾಜನಗರ: ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕಾಂಗ್ರೆಸ್‍ನವರು (Congress) ಘೋಷಣೆ ಮಾಡಲಿ ಎಂದು ಸಚಿವ ವಿ. ಸೋಮಣ್ಣ (V Somanna) ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ (Jagadish Shettar), ಸವದಿ ಅಂತೀರಲ್ಲಾ. ಹಾಗಾದ್ರೆ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಿ ನೋಡೊಣ. ಲಿಂಗಾಯತರು ಸ್ವಾಭಿಮಾನಿಗಳು, ಆದರೆ ದಡ್ಡರಲ್ಲ. ವೋಟ್ ಬ್ಯಾಂಕ್ ಮಾಡಿಕೊಂಡ ವರ್ಗಗಳಿಗೆ 75 ವರ್ಷಗಳಾದ್ರೂ ಏನು ಮಾಡಿಲ್ಲ. ಜನ ಬದಲಾವಣೆ ಬಯಸಿದ್ದಾರೆ. ಲಿಂಗಾಯತರು ಬುದ್ದಿವಂತರು ಮತ್ತು ಪ್ರಜ್ಞಾವಂತರು ಎಂದು ಹೇಳಿದರು.
Advertisement
Advertisement
ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಲು ಹೊರಟ್ರೆ ನಿಮಗೆ ನಿರಾಸೆಯಾಗುತ್ತದೆ. ಯೂಸ್ ಅಂಡ್ ಥ್ರೋ ಮಾಡುವ ತಂತ್ರಗಾರಿಕೆ ಬೇಡ. ವೀರೇಂದ್ರ ಪಾಟೀಲ್ ತೆಗೆದವರು ಯಾರು? ರಾಜಶೇಖರ್ ಮೂರ್ತಿ ಓಡಿಸಿದವರು ಯಾರು? ನಿಜಲಿಂಗಪ್ಪ ಅವರನ್ನು ದೇಶ ಬಿಟ್ಟು ಕಳಿಸಿದವರು ಯಾರು ಎಂದ ಅವರು, ಕಾಂಗ್ರೆಸ್‍ನವರು ಗಂಟೆಗೊಂದು, ಗಳಿಗೆಗೊಂದು ದಾಳ ಉರುಳಿಸುತ್ತಾರೆ. ಈ ದಾಳ ಏನು ನಡೆಯಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಲಿಂಗಾಯತರು ಸಭೆ ಸೇರಿದ ವಿಚಾರವಾಗಿ ಮಾತನಾಡಿದ ಅವರು, ನಾಳೆ ದಿನ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಕಮ್ಮಿ ಆದ್ರೆ ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ವಿರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರ ಕಾಲದಲ್ಲಿ ಏನು ವ್ಯತ್ಯಾಸ ಆಯ್ತು. ಅದನ್ನೆಲ್ಲ ಚರ್ಚೆ ಮಾಡಿದೆವು. ಮುಂದೆ ಸಿಎಂ ಯಾರಾಗಬೇಕು ಎಂಬುದನ್ನು ಯಡಿಯೂರಪ್ಪ (BS Yediyurappa) ಮತ್ತು ಬೊಮ್ಮಾಯಿ (Basavaraj Bommai) ಚರ್ಚೆ ಮಾಡುತ್ತಾರೆ. ವೀರಶೈವರನ್ನು ಮೂಲೆ ಗುಂಪು ಮಾಡುವ ಸಂದರ್ಭ ಯಾವುದೇ ಕಾರಣಕ್ಕೂ ಬರಲ್ಲ. ವೀರಶೈವರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ಮಾತ್ರ ಎಂದರು.
Advertisement
ಸೋಮಣ್ಣ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿದ ಅವರು, ನನಗೆ ಖುಷಿನೂ ಆಗುತ್ತೆ. ನೋವು ಆಗುತ್ತೆ. ಈ ರೀತಿ ಹೇಳಿ ನನಗೆ ಶತ್ರುಗಳನ್ನು ಜಾಸ್ತಿ ಮಾಡಬೇಡಿ ಎಂದು ಮನವಿ ಮಾಡಿದ ಅವರು, ಬಿ.ಎಲ್.ಸಂತೋಷ್ ಒಬ್ಬರು 24*7 ಸಕ್ರೀಯ ಕಾರ್ಯಕರ್ತರು. ಅವರಿಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ. ಬಿ.ಎಲ್. ಸಂತೋಷ್ ಬಗ್ಗೆ ಮಾತನಾಡಲು ಏನು ಇಲ್ಲ. ಅವರು ಇಡೀ ರಾಷ್ಟ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ನಮ್ಮ ರಾಜ್ಯದವರು ಎಂದು ಹೆಮ್ಮ ಪಡಬೇಕು ಎಂದು ಹೇಳಿದರು.
ಕಾಂಗ್ರೆಸ್‍ನವರು ಕೇವಲ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಬೇರೆ ಏನು ಹೇಳಲು ಆಗುತ್ತಿಲ್ಲ. ಮೋದಿ, ಅಮಿತ್ ಶಾ, ಸೋಮಣ್ಣ ಮೇಲೆ ಏನು ಹೇಳಕಾಗುತ್ತೆ? ಅದಕ್ಕೆ ಈ ರೀತಿ ಹೇಳುತ್ತಾರೆ. ನೀವೇನೆ ಬಾಯಿ ಬಡಿದುಕೊಂಡ್ರು ಲಿಂಗಾಯತರು ನಂಬುವುದಿಲ್ಲ. ಜಗದೀಶ್ ಶೆಟ್ಟರ್ ನಮಗೆ ಬೇಕಾದವರು. ನೀವು ರಾಜ್ಯಸಭಾ ಸದಸ್ಯರಾಗಿ ಮಂತ್ರಿ ಆಗಿ ಎಂದು ಹೈಕಮಾಂಡ್ ಹೇಳಿತ್ತು. ನಿಮ್ಮ ಮನೆಯವರನ್ನೇ ಅಭ್ಯರ್ಥಿ ಮಾಡಿ ಎಂದು ಹೇಳಿತ್ತು. ಆದ್ರೆ ಅವರು ಕೇಳಲಿಲ್ಲ. ನಿಮ್ಮನ್ನು ಮುಖ್ಯಮಂತ್ರಿ, ಸ್ಪೀಕರ್, ವಿಪಕ್ಷ ನಾಯಕರನ್ನಾಗಿ ಮಾಡಿದ್ದು ಯಾರು? ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಶೆಟ್ಟರ್ ಇಷ್ಟೊಂದು ವೀಕ್ ಮೈಂಡೆಡ್ ಎಂದು ಗೊತ್ತಿರಲಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್
ಶೆಟ್ಟರ್ ಇನ್ನು 6 ತಿಂಗಳು ಕೂಡ ಕಾಂಗ್ರೆಸ್‍ನಲ್ಲಿ ಇರಲ್ಲ. ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಒಂದೆಡೆ ಸಿದ್ದರಾಮಯ್ಯ, ಒಂದೆಡೆ ಖರ್ಗೆ, ಒಂದೆಡೆ ಡಿಕೆಶಿ ಮತ್ತೊಂದೆಡೆ ಪರಮೇಶ್ವರ್ ಇದ್ದಾರೆ. ಕಾಂಗ್ರೆಸ್ ನವರದು ಬರೀ ಮೊಸಳೆ ಕಣ್ಣೀರು. ಯಾಕೆ ನೀವು ದುಡುಕಿನ ತೀರ್ಮಾನ ತೆಗೆದುಕೊಂಡ್ರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ : ಮೊಯಿದ್ದೀನ್ ಬಾವಾ ಆರೋಪ