ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಬಿ.ವಿ ನಾಯಕ್ (B.V.Nayak) ಕುಟುಂಬಕ್ಕೆ ಮೀಸಲು ಎಂದು ಭಾವಿಸಿದ್ದ ‘ಕೈ’ ಕಾರ್ಯಕರ್ತರು ಈಗ ಬಂಡಾಯದ ಕಹಳೆ ಊದುತ್ತಿದ್ದಾರೆ. ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ್ ವಿರುದ್ಧ ಅವರ ಸಹೋದರ ರಾಜಶೇಖರ್ ನಾಯಕ್ (Rajashekar Nayak) ಸೆಟೆದು ನಿಂತಿದ್ದಾರೆ.
ಒಂದೇ ಮನೆಯಲ್ಲಿ ಮೂರು ಜನ ಬಿ.ವಿ.ನಾಯಕ್, ರಾಜಶೇಖರ್ ನಾಯಕ್ ಹಾಗೂ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್ ‘ಕೈ’ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಮೂರು ಕ್ಷೇತ್ರಗಳಿಗೆ ಅರ್ಜಿ ಹಾಕಿದ್ದ ಬಿ.ವಿ.ನಾಯಕ್ ದೇವದುರ್ಗ ಕಡೆ ತಲೆ ಹಾಕಿರಲಿಲ್ಲ. ಈಗ ಬಿಜೆಪಿ (BJP) ಹಾಲಿ ಶಾಸಕ ಕೆ.ಶಿವನಗೌಡ ನಾಯಕ್ (K.Shivanagouda Nayak) ಚಿಕ್ಕಪ್ಪ ಎಂ.ವಿ.ಮೇಟಿಯನ್ನು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭೇಟಿ ಮಾಡಿಸಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಐವರ ಪೈಕಿ ನಾಲ್ವರಿಗೆ ಕೊಕ್ ಸಾಧ್ಯತೆ – ಜಾತಿ ಲೆಕ್ಕಾಚಾರದಂತೆ ಟಿಕೆಟ್ ಹಂಚಿಕೆ
Advertisement
Advertisement
ಹೊಸಬರಿಗೆ ಈ ಬಾರಿ ಟಿಕೆಟ್ ಕೊಡಿಸಲು ಬಿ.ವಿ ನಾಯಕ್ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಹ ಆಕ್ರೋಶಗೊಂಡಿದ್ದಾರೆ. ಹೀಗಾಗಿ ದೇವದುರ್ಗದ ಕಾಂಗ್ರೆಸ್ ಟಿಕೆಟ್ ಪೈಪೋಟಿ ವಿಭಿನ್ನ ತಿರುವುಗಳನ್ನು ಪಡೆಯುತ್ತಿದ್ದು, ಬಂಡಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನೂ ಓದಿ: ನಾನು ವರುಣಾದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ : ಸೋಮಣ್ಣ
Advertisement
ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸರಣಿ ಸಭೆಗಳನ್ನು ಕರೆಯುತ್ತಿದ್ದು, ಬಿ.ವಿ.ನಾಯಕ್ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಭೇಟಿ ಮಾಡಿದ್ದರೂ ಸ್ಪಷ್ಟ ನಿಲುವು ವ್ಯಕ್ತಪಡಿಸದೇ, ಕಾರ್ಯಕರ್ತರೊಂದಿಗೆ ಬೆರೆಯದೇ ಗೊಂದಲ ಮೂಡಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ದುಡಿಯದ, ಪಕ್ಷದ ಸದಸ್ಯನೂ ಅಲ್ಲದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಎಂ.ವಿ.ಮೇಟಿಗೆ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ ಎಂದು ಕೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ನಂದಿನಿ’ ನಮ್ಮವಳು – ನಮ್ಮ ಹಾಲು ನಮ್ಮ ಬದುಕು; ನಂದಿನಿ ಉಳಿಸಿ ಎಂದ ಡಿಕೆಶಿ
Advertisement
ರಾಯಚೂರು (Raichur) ಗ್ರಾಮೀಣ, ಮಾನ್ವಿ, ದೇವದುರ್ಗ ಮೂರು ಕಡೆ ಅರ್ಜಿ ಸಲ್ಲಿಸಿದ್ದ ಬಿ.ವಿ ನಾಯಕ್ ಮಾನ್ವಿ ಕ್ಷೇತ್ರದ ಕಡೆ ಒಲವು ತೋರಿಸುತ್ತಿದ್ದಾರೆ. ಆದರೆ ಮಾನ್ವಿ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಬಿ.ವಿ.ನಾಯಕ್ ಸ್ಪರ್ಧಿಸಿದರೆ ನಾವೇ ಸೋಲಿಸುತ್ತೇವೆ ಎಂದು ಈಗಾಗಲೇ ಬಂಡಾಯದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್