ಉಡುಪಿ: ಕರ್ನಾಟಕ ಕುರುಕ್ಷೇತ್ರಕ್ಕೆ ಒಂದು ತಿಂಗಳು ಬಾಕಿ ಇದೆ. ಕಾಂಗ್ರೆಸ್ (Congress) ಎರಡು ಪಟ್ಟಿ ಬಿಡುಗಡೆ ಮಾಡಿದರೂ ಬಿಜೆಪಿ (BJP) ಯ ಪಟ್ಟಿ ಇನ್ನೂ ಹೊರಬಿದ್ದಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಯುಪಿ ಗುಜರಾತ್ ಮಾಡೆಲ್ (Gujrat Model) ಅನುಕರಣೆ ಮಾಡುತ್ತಾ ಎಂಬ ಚರ್ಚೆ ಶುರುವಾಗಿದೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂಬುದು ಈಗ ದೊಡ್ಡ ಚರ್ಚೆಯ ವಿಚಾರವಾಗಿದೆ.
Advertisement
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ (Vidhanasabha Constituency) ದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಪಾರುಪತ್ಯವಿದೆ. ಈ ಬಾರಿ ಮತ್ತೆ ಕ್ಲೀನ್ ಸ್ವಿಪ್ ಮಾಡುವ ಇರಾದೆ ಬಿಜೆಪಿಯದ್ದು. ಆದರೆ ಇತ್ತೀಚೆಗೆ ಗೆಲ್ಲುವ ಕುದುರೆ ಹಾಲಾಡಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಇಡೀ ಜಿಲ್ಲೆಯ ಬಿಜೆಪಿ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಉಡುಪಿ ಜಿಲ್ಲೆಯ 5 ಕ್ಷೇತ್ರಗಳಾದ ಕಾಪು, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಉಡುಪಿಯಲ್ಲಿ ಬಿಜೆಪಿ ಕಳೆದ 5 ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿದೆ. ಈ ಬಾರಿ ಐವರು ಶಾಸಕರಲ್ಲಿ ನಾಲ್ವರಿಗೆ ಕೊಕ್ ಕೊಟ್ಟು ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಹೊಸ ಲೆಕ್ಕಾಚಾರ ಹಾಕಿದಂತಿದೆ.
Advertisement
Advertisement
ಯಾರ ಹೆಸರು ಫೈನಲ್..!?
ಕ್ಷೇತ್ರ: ಉಡುಪಿ
ಆಕಾಂಕ್ಷಿಗಳು: ಪ್ರಮೋದ್ ಮಧ್ವರಾಜ್/ಯಶ್‍ಪಾಲ್ ಸುವರ್ಣ
ಸಮುದಾಯ: ಮೊಗವೀರ (ಹಾಲಿ ಶಾಸಕ ರಘುಪತಿ ಭಟ್)
Advertisement
ಕ್ಷೇತ್ರ : ಕುಂದಾಪುರ
ಆಕಾಂಕ್ಷಿ : ಕಿರಣ್ ಕುಮಾರ್ ಕೊಡ್ಗಿ
ಸಮುದಾಯ: ಬ್ರಾಹ್ಮಣ (ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ್‍ಶೆಟ್ಟಿ – ಕಿರಣ್ ಹಾಲಾಡಿ ಆಪ್ತ)
ಕ್ಷೇತ್ರ: ಕಾಪು
ಆಕಾಂಕ್ಷಿ: ಗುರ್ಮೆ ಸುರೇಶ್ ಶೆಟ್ಟಿ
ಸಮುದಾಯ: ಬಂಟ (ಹಾಲಿ ಶಾಸಕ ಲಾಲಾಜಿ ಮೆಂಡನ್)
ಕ್ಷೇತ್ರ: ಬೈಂದೂರು
ಆಕಾಂಕ್ಷಿಗಳು: ಸುಕುಮಾರ ಶೆಟ್ಟಿ/ ಗುರುರಾಜ್ ಗಂಟಿಹೊಳೆ
ಸಮುದಾಯ: ಬಂಟ (ಸುಕುಮಾರ್ ಶೆಟ್ಟಿ ಹಾಲಿ ಶಾಸಕ- ಯಡಿಯೂರಪ್ಪ ಆಪ್ತ)
ಕ್ಷೇತ್ರ: ಕಾರ್ಕಳ
ಆಕಾಂಕ್ಷಿ: ಸುನೀಲ್ ಕುಮಾರ್
ಸಮುದಾಯ: ಬಿಲ್ಲವ/ ಪೂಜಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಒಟ್ಟಿನಲ್ಲಿ ಹಾಲಾಡಿ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಅವರ ಆಪ್ತರಾದ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವ ವಿಚಾರದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಗೆ ಕಾರಣವಾಗಿದೆ. ಈ ಬಾರಿ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಾರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇನ್ನುಳಿದಂತೆ ಮೊಗವೀರ ಬಿಲ್ಲವ ಮತ್ತು ಬಂಟ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಅನಿವಾರ್ಯತೆ ಇದೆ. ಇದನ್ನೂ ಓದಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ
ಉಡುಪಿ ವಿಧಾನಸಭಾ ಕ್ಷೇತ್ರ (Udupi Vidhanasabha Constituency) ದ ಹಾಲಿ ಶಾಸಕ ರಘುಪತಿ ಭಟ್‍ಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಾಕಷ್ಟು ವದಂತಿಗಳು ಕೇಳಿಬಂದಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಘುಪತಿ ಭಟ್ (Raghupathi Bhat) ಅವರಿಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ, ಉಡುಪಿಯಲ್ಲಿ ಹೊಸ ಪ್ರಯೋಗಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು.. ಏನಾಗಲಿದೆ ಎಂಬುದು ಕಾದುನೋಡಬೇಕಿದೆ.