ಬಿಜೆಪಿ ಅಭ್ಯರ್ಥಿ ಪರ 1 ಕೋಟಿ ರೂ. ಬೆಟ್ – ಪುರಸಭಾ ಸದಸ್ಯನ ಮನೆ ಮೇಲೆ ದಾಳಿ

Public TV
1 Min Read
KIRAN copy 1

ಚಾಮರಾಜನಗರ: ಬಿಜೆಪಿ (BJP) ಶಾಸಕ ನಿರಂಜನ್ ಕುಮಾರ್ (Niranjan Kumar) ಗೆದ್ದೇ ಗೆಲ್ಲುತ್ತಾರೆ. ನಾನು 1 ಕೋಟಿ ರೂ. ಬೆಟ್ ಕಟ್ಟುತ್ತೇನೆ ಎಂದು ಬಾಜಿಗೆ ಆಹ್ವಾನಿಸಿದ ಗುಂಡ್ಲುಪೇಟೆ (Gundlupete) ಪುರಸಭಾ ಸದಸ್ಯನ ಮನೆ ಮೇಲೆ ಪೊಲೀಸರು ದಾಳಿ (Raid) ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಪರ ಪುರಸಭಾ ಸದಸ್ಯ ಕಿರಣ್ ಒಂದು ಕೋಟಿ ರೂ. ಬೆಟ್ಟಿಂಗ್‌ಗೆ (Betting) ಆಹ್ವಾನ ನೀಡಿದ್ದರು. ಅದಾದ ಬಳಿಕ ಕಿರಣ್ ತಮ್ಮ ಫೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇದೀಗ ಕಿರಣ್ ಮನೆ ಮೇಲೆ ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಹಾಗೂ ಚುನಾವಣೆ ಫ್ಲೈಯಿಂಗ್‌  ಸ್ಕ್ವಾಡ್‌  ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ನಿವಾಸದಲ್ಲಿ ನಾಯಕರ ಸಭೆ – ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ

ಬಿಜೆಪಿ ಅಭ್ಯರ್ಥಿ ಪರ ಒಂದು ಕೋಟಿ ರೂ. ಬೆಟ್ಟಿಂಗ್ ಕಟ್ಟುತ್ತೇನೆ ಎಂದು ಹಣದ ಕಂತೆಯೊಂದಿಗೆ ಕಿರಣ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ದಾಳಿ ನಡೆಸಿ ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಪರಿಶೀಲನೆ ವೇಳೆ ದೊರೆತ 1.20 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೋಲು-ಗೆಲುವಿನ ಲೆಕ್ಕಾಚಾರ; ‘ಚೊಂಬೇಶ್ವರ’ ಅಂತ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು

Share This Article