ರಮೇಶ್ ಜಾರಕಿಹೊಳಿ ಸೋಲಿಸೋದೇ ನಮ್ಮ ಅಜೆಂಡಾ: ಕೈ ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ

Public TV
2 Min Read
PRAKASH BAGOJI copy

ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarakiholi) ಸೋಲಿಸೋದೇ ನಮ್ಮ ಒನ್ ಪಾಯಿಂಟ್ ಅಜೆಂಡಾ ಎಂದು ಗೋಕಾಕ್ ಕಾಂಗ್ರೆಸ್ ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ (Prakash Bagoji) ಹೇಳಿದರು.

ಬೆಳಗಾವಿ (Belagavi) ಜಿಲ್ಲೆ ಗೋಕಾಕ್‌ನ (Gokak) ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಕೊಣ್ಣೂರ್ ಹಾಗೂ ಬಸನಗೌಡ ಹೊಳೆಯಾಚಿಯವರಿಗೆ ಬೆಂಬಲ ವ್ಯಕ್ತಪಡಿಸಿದರು. ಟಿಕೆಟ್ ವಂಚಿತ ಆಕಾಂಕ್ಷಿಗಳಿಂದ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ್ ಕಡಾಡಿಗೆ (Dr.Mahantesh Kadadi) ಬೆಂಬಲ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅಶೋಕ್ ಪೂಜಾರಿಯವರಿಗೂ (Ashok Poojari) ಬೆಂಬಲ ನೀಡುವಂತೆ ಎಲ್ಲರೂ ಸೇರಿ ಒಕ್ಕೊರಲ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವದುರ್ಗ ‘ಕೈ’ ಟಿಕೆಟ್ ಗೊಂದಲ- ಅಣ್ಣ ಬಿ.ವಿ.ನಾಯಕ್ ವಿರುದ್ಧ ತಮ್ಮ ರಾಜಶೇಖರ್ ನಾಯಕ್ ಬಂಡಾಯ 

congress

2008ರಿಂದ ಅಶೋಕ್ ಅಣ್ಣನವರನ್ನು ಬೆಂಬಲಿಸಿ ಗೆಲ್ಲಿಸಲು ಪ್ರಯತ್ನ ಮಾಡಿದ್ದೇವೆ. ಗೋಕಾಕ್‌ನಲ್ಲಿ ದುಷ್ಟ ಶಕ್ತಿ ಹೊಡೆಯಬೇಕು ಎಂಬ ಗುರಿ ಇದೆ. ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಕೊಡುವ ದಿನಾಂಕ ಮುಗಿದ ಬಳಿಕ ಡಾ.ಮಹಾಂತೇಶ್ ಕಡಾಡಿ ಅರ್ಜಿ ಸಲ್ಲಿಸಿದ್ದರು. ಲೇಟ್ ಅಪ್ಲಿಕೇಶನ್ ಕೊಟ್ಟವರಿಗೆ ಪಕ್ಷ ಟಿಕೆಟ್ ನೀಡಿದ್ದಾರೆ. ಅಶೋಕ್ ಪೂಜಾರಿಯವರಿಗೆ ಇಡೀ ತಾಲೂಕಿನ ಜನ 4 ಬಾರಿ ಅವಕಾಶ ನೀಡಿದೆ. ಮೊಟ್ಟ ಮೊದಲ ಬಾರಿಗೆ ಪಂಚಮಸಾಲಿ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಶೋಕ್ ಪೂಜಾರಿಯವರು ಈ ಚುನಾವಣೆಯಲ್ಲಿ (Election) ಕಿಂಗ್ ಮೇಕರ್ ಆಗಬೇಕು. ಲಿಂಗಾಯತ ಸಮುದಾಯ ಅಷ್ಟೇ ಅಲ್ಲ ಇಡೀ ತಾಲೂಕಿನ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದರು. ಇದನ್ನೂ ಓದಿ: ನಮಗೆ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ, ಅವರ ಆದೇಶ ಪಾಲಿಸುತ್ತೇವೆ: ಡಿ.ಕೆ.ಸುರೇಶ್ 

ನಮ್ಮ ಗುರಿ ರಮೇಶ್ ಜಾರಕಿಹೊಳಿಯವರನ್ನು ಸೋಲಿಸುವುದು ಒಂದೇ. ನಾವು ಅಶೋಕ್ ಪೂಜಾರಿಯವರಿಗೆ ಮನವಿ ಮಾಡುತ್ತೇವೆ. ಅಶೋಕ್ ಪೂಜಾರಿಯವರ ಕಾಲಿಗೆ ಬಿದ್ದು ಕರೆದುಕೊಂಡು ಬರುತ್ತೇವೆ. ಇಡೀ ರಾಜ್ಯಾದ್ಯಂತ ಪಂಚಮಸಾಲಿಗಳ ಹವಾ ಇದೆ. ಗೋಕಾಕ್‌ನಲ್ಲಿ ಪಂಚಮಸಾಲಿಯವರ ಒಳ್ಳೆಯ ಸಂಘಟನೆ ಇದೆ. ನೀವು ಒಗ್ಗೂಡಿ ನಾವು ವೋಟ್ ಹಾಕುತ್ತೇವೆ ಎಂದು ಬೇರೆ ಸಮಾಜದವರು ಹೇಳುತ್ತಿದ್ದಾರೆ. ಒಂದು ವ್ಯವಸ್ಥೆ ಸೋಲಿಸಲು ನಾವು ಒಂದಾಗಬೇಕು. ಇದಕ್ಕೆ ಅಶೋಕ್ ಪೂಜಾರಿಯವರದ್ದೇ ನೇತೃತ್ವ. ಅವರೇ ಕಿಂಗ್ ಮೇಕರ್ ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

Share This Article