ಕಲಬುರಗಿ: ಸರ್ಕಾರ ರಚನೆ ಸಂದರ್ಭದಲ್ಲಿ ಅಪರೇಷನ್ ಕಮಲನೋ ಅಪರೇಷನ್ ಹಸ್ತವೋ ನಡಿಯೋದು ಸರ್ವೆ ಸಾಮಾನ್ಯ. ಆದರೆ ಇಷ್ಟು ದಿನ ಅಪರೇಷನ್ ಕಮಲ (Operation Kamala) ಮಾಡ್ತಿದ್ದ ಬಿಜೆಪಿಗೆ ಬಿಗ್ ಶಾಕ್ ಕೊಡಲು ಕಾಂಗ್ರೆಸ್ ಅಪರೇಷನ್ ಹಸ್ತಕ್ಕೆ ಮುಂದಾಗಿದೆ. ಈ ಮೂಲಕ ಓರ್ವ ಹಾಲಿ ಬಿಜೆಪಿ (BJP) ಶಾಸಕನಿಗೆ ಗಾಳ ಹಾಕಿರೋ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷ ಖರ್ಗೆ ತವರಲ್ಲಿ ತೀವ್ರ ಸಂಚಲನ ಮೂಡಿಸಿದೆ.
Advertisement
ಮುಂಬರುವ ವಿಧಾನಸಭೆ ಚುನಾವಣೆ (Vidhanasabha Election) ಗೆ ಸಜ್ಜಾಗ್ತಿರೋ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಬಾಬೂರಾವ್ ಚಿಂಚನಸೂರ್ ಗುಡ್‍ಬೈ ಹೇಳಿ ಶಾಕ್ ಕೊಟ್ಟಿದ್ರು. ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ನಾಯಕ ಎಮ್‍ಎಲ್‍ಸಿ ಚಿಂಚನಸೂರ್ (Baburao Chinchanasur) ರನ್ನ ಕಾಂಗ್ರೆಸ್ ತನ್ನತ್ತ ಸೆಳೆದು ಯಶಸ್ವಿಯಾಗಿತ್ತು. ಇದೀಗ ಎಐಸಿಸಿ ಅಧ್ಯಕ್ಷ ಖರ್ಗೆ ತವರು ಕ್ಷೇತ್ರ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ (Congress) ಮುಂದಾಗಿದೆ.
Advertisement
Advertisement
ಕಲಬುರಗಿ ಜಿಲ್ಲೆಯಲ್ಲಿ ಓರ್ವ ಹಾಲಿ ಬಿಜೆಪಿ ಶಾಸಕನಿಗೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಸದ್ದಿಲ್ಲದೆ ಪ್ಲಾನ್ ರೂಪಿಸುತ್ತಿದೆ. ಇದರ ಜೊತೆಗೆ ಇಬ್ಬರು ಮಾಜಿ ಶಾಸಕರನ್ನೂ ಕಾಂಗ್ರೆಸ್‍ಗೆ ಕರೆತರಲು ಅಪರೇಷನ್ ಹಸ್ತ ರೂಪುರೇಷೆ ಸಿದ್ಧತೆ ಮಾಡಿಕೊಂಡಿದೆ. ಯುಗಾದಿ ಹಬ್ಬ ಮುಗಿದ ನಂತರ ಜಿಲ್ಲೆಯಲ್ಲಿ ಅಪರೇಷನ್ ಹಸ್ತಕ್ಕೆ ಮೂಹುರ್ತ ಫಿಕ್ಸ್ ಮಾಡಲಾಗುತ್ತದೆ ಅಂತಾ ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ
Advertisement
ಹೈಕಮಾಂಡ್ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ತಯಾರಿಯಲ್ಲಿದೆ. ಈ ಹಿಂದೆ ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನ ಅಪರೇಷನ್ ಕಮಲ ಮಾಡಿ ಸರ್ಕಾರವನ್ನೆ ಕೆಡವಿದ್ದ ಬಿಜೆಪಿಗೆ ಅದೇ ದಾಟಿಯಲ್ಲಿ ತಿರುಗೇಟು ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಎಐಸಿಸಿ ತವರು ಕ್ಷೇತ್ರ ಕಲಬುರಗಿಯಲ್ಲೆ ಆಪರೇಷನ್ ಹಸ್ತಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಪ್ರಿಯಾಂಕ್ ಖರ್ಗೆ (Priyank Kharge) ಬೆಂಬಲದಿಂದಲೇ ಇತ್ತೀಚೆಗೆ ಚಿಂಚನಸೂರ್ ಬಿಜೆಪಿ ತೊರೆದಿದ್ರು. ಇದರ ಮಧ್ಯೆ ಮತ್ತೋರ್ವ ಹಾಲಿ ಶಾಸಕನನ್ನ ಕಾಂಗ್ರೆಸ್ ಅಪರೇಷನ್ ಹಸ್ತದ ಮೂಲಕ ಪಕ್ಷಕ್ಕೆ ಕರೆತರಲು ತಯಾರಿ ನಡೆಸಿದೆ. ಐವರು ಬಿಜೆಪಿ ಶಾಸಕರ ಪೈಕಿ ಯಾರು ಆ ಶಾಸಕ ಅನ್ನೊ ಕುತೂಹಲ ಮೂಡಿಸಿದೆ.