ಚಿಕ್ಕಬಳ್ಳಾಪುರ: ಚುನಾವಣೆ ದಿನ ನಂದಿಗಿರಿಧಾಮ (Nandi Hills) ಬಂದ್ ಮಾಡಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮತದಾನ (Election) ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಮೇ 10 ರಂದು ಪ್ರವಾಸಿಗರಿಗೆ ನಿರ್ಬಂಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಗರಾಜು ಆದೇಶ ಪ್ರಕಟಿಸಿದ್ದಾರೆ.
ಮೇ 10 ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೆ ಪ್ರವೇಶ ನಿಷೇಧಿಸಲಾಗಿದೆ. ಮೇ 10 ರಂದು ಆನ್‌ಲೈನ್ ಬುಕ್ಕಿಂಗ್‌ಗೂ ಸಹ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ಅಮೆರಿಕದ ಮಾಲ್‌ನಲ್ಲಿ ಶೂಟೌಟ್ ಪ್ರಕರಣ – ಭಾರತ ಮೂಲದ ಎಂಜಿನಿಯರ್ ಸೇರಿ 9 ಮಂದಿ ಸಾವು
ಬುಧವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ (Campaign) ತೆರೆ ಬಿದ್ದಿದೆ. ಸ್ಥಳೀಯರಲ್ಲದ ನಾಯಕರು ಕ್ಷೇತ್ರಗಳನ್ನು ತೊರೆದರೆ ರಾಷ್ಟ್ರೀಯ ಮುಖಂಡರು ರಾಜ್ಯವನ್ನು ತೊರೆದಿದ್ದಾರೆ. ಇನ್ನು ಏನೇ ಇದ್ದರೂ ಮನೆ ಮನೆ ಪ್ರಚಾರದ ಆಟವಷ್ಟೇ ಬಾಕಿ ಉಳಿದಿದೆ.