ರಾಜ್ಯದ 3 ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ: ಮುಖ್ಯಮಂತ್ರಿ ಚಂದ್ರು

Public TV
2 Min Read
mukyamanthri chandru

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು 75 ವರ್ಷಗಳಿಂದ ಆಡಳಿತ ಮಾಡಿವೆ. ಮೂರು ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು , ಸುಳ್ಳುಗಾರರಿದ್ದಾರೆ, ಇವರೆಲ್ಲರೂ ತೊಲಗಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಲು ಆಪ್ ಗೆಲ್ಲಬೇಕಿದೆ ಎಂದು ಆಪ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukyamanthri Chandru) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS), ಬಿಜೆಪಿ (BJP), ಕಾಂಗ್ರೆಸ್ (Congress) ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕರಗತ ಮಾಡಿವೆ. ಒಂದು ಕಡೆ ಜೆಡಿಎಸ್ ಅನೈತಿಕವಾಗಿ ಅಧಿಕಾರ ಹಿಡಿಯುತ್ತಿದೆ. ಮತ್ತೊಂದು ಕಡೆ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ, ದುರಾಡಳಿ ಜೊತೆಗೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹುಟ್ಟುಹಾಕಿದೆ. ಇಷ್ಟು ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಇದು ಸಹ ನಮ್ಮ ಯೋಜನೆಗಳ ಕಾಪಿಯಾಗಿದೆ ಎಂದು ಆರೋಪಿದರು.

Congress BJP JDS

ಚುನಾವಣೆ (Election) ದೃಷ್ಟಿಯಿಂದ ಬಿಜೆಪಿ ಒಳಮೀಸಲಾತಿ ಘೋಷಣೆ ಮಾಡಿದೆ ಇದು ಖಂಡನೀಯ. ಜನಗಣತಿ ಆಧಾರ ಮೇಲೆ ಮತ್ತು ಕಾಂತರಾಜ ಆಯೋಗದ ಆಧಾರದ ಮೇಲೆ‌ ಮೀಸಲಾತಿ ನೀಡಬೇಕು. ಇದಕ್ಕೂ ಮೊದಲು ಜಯಪ್ರಕಾಶ ಹೆಗಡೆ ಅವರು ನೀಡಿದ ಮಧ್ಯಂತರ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದೇ ಆಪ್‌ ಸರ್ಕಾರದ ಗುರಿಯಾಗಿದೆ ಎಂದರು. ಇದನ್ನೂ ಓದಿ: ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್

ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಶೂನ್ಯ ಭ್ರಷ್ಟಾಚಾರ ಗ್ಯಾರಂಟಿ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಪ್ರತಿ ಮನೆಗೆ 300 ಯುನಿಟ್ 24/7 ಉಚಿತ ವಿದ್ಯುತ್, ಉಚಿತ ಉತ್ತಮ ಶಿಕ್ಷಣ, ಉಚಿತ ಬಸ್ ಸೌಲಭ್ಯ, ಮೊಹಲಾ ಕ್ಲಿನಿಕ್, ಯುವಕರಿಗೆ ವರ್ಷ 2 ಲಕ್ಷ ಭತ್ಯೆ, ಮಹಿಳೆಯರಿಗೆ ಗ್ಯಾರಂಟಿ ಉದ್ಯೋಗ ಮೀಸಲು, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನು ರದ್ದುಗೊಳಿಸುವುದು, ಬೆಂಬಲ ಬೆಲೆ, ಸಣ್ಣ ರೈತರಿಗೆ ಒಂದು ಬಾರಿ‌ ಸಾಲಮನ್ನಾ, ಸರ್ಕಾರಿ ಉದ್ಯೋಗಕ್ಕೆ ಕನ್ನಡ ಕಡ್ಡಾಯ ಎಂಬ ಅಂಶಗಳನ್ನು ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

Share This Article