ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

Public TV
2 Min Read
narendra modi 4 1

– ಪ್ರಧಾನಿ ಸಚಿವಾಲಯದಿಂದ ಸಿಗುತ್ತಾ ಸಿಗ್ನಲ್..?

ಬೆಂಗಳೂರು: ಕರ್ನಾಟಕ ಕಬ್ಜಾಗೆ ಕಸರತ್ತು ನಡೆಸ್ತಿರೋ ಬಿಜೆಪಿ (BJP) ಪಾಳಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಲ್ಲಿ ಮೊನ್ನೆಯಷ್ಟೇ ರೋಡ್ ಶೋ ನಡೆಸಿದ್ದ ಮೋದಿ (Narendra Modi) ಮತ್ತೊಮ್ಮೆ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ. ಬೆಂಗಳೂರನ್ನು ಗೆಲ್ಲಲು 23 ಕ್ಷೇತ್ರಗಳನ್ನು ಕವರ್ ಮಾಡಲು ಬೃಹತ್ ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ಯಂತೆ.

ಅದು ಗುಜರಾತ್ ಚುನಾವಣೆ (Gujarat Election) ಸಂದರ್ಭ. ಮತದಾನದಕ್ಕೆ ಮೂರು ದಿನ ಇರುವಾಗ ಬರೋಬ್ಬರಿ 50 ಕಿಲೋಮೀಟರ್ ರೋಡ್ ಶೋ ನಡೆಸಿ ಪಕ್ಷದ ಭಾರೀ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಇದೀಗ ಅಂಥಾದ್ದೇ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಮೋದಿ ಪ್ಲಾನ್ ಮಾಡ್ಕೊಂಡಿದ್ದಾರೆ. ಮೇ 6ರಂದು ಅಂದರೆ ಇದೇ ಶನಿವಾರ ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ (Modi Mega Road Show) ಆಯೋಜಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಚರ್ಚೆಗಳು ನಡೆದಿವೆ.

narendra modi

ಮೇ 6ರಂದು ಬೆಳಗ್ಗೆ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿಯವರ ನೇತೃತ್ವದಲ್ಲಿ ಎಂಟು ಕಿಲೋಮೀಟರ್ ರೋಡ್ ಶೋ ಆಯೋಜಿಸುವುದು. ಮತ್ತು ಅದೇ ದಿನ ಸಂಜೆ ಕೋಣನಕುಂಟೆಯಿಂದ ಮಲ್ಲೇಶ್ವರಂನ ಮಾರಮ್ಮ ಸರ್ಕಲ್ ವರೆಗೂ ಅಂದ್ರೆ 30 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಬಿಜೆಪಿ ಪ್ಲಾನ್ ಮಾಡಿದೆ. 30 ಕಿಲೋಮೀಟರ್ ರೋಡ್ ಶೋ ಮೂಲಕ ಬೆಂಗಳೂರಿನ 23 ಮತ ಕ್ಷೇತ್ರಗಳನ್ನು ಕವರ್ ಮಾಡಲಾಗುತ್ತದೆ. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

ಬಿಗ್ ರೋಡ್ ಶೋ: ಬ್ರಿಗೇಡ್ ಮಿಲೇನಿಯಂ, ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್, ಸ್ಯಾಂಕಿಟ್ಯಾಂಕ್.

narendra modi 5 1

ಸಂಜೆ ಮೋದಿ ನಡೆಸಲಿರೋ ರೂಟ್ ಮ್ಯಾಪ್ ನೋಡೋದಾದ್ರೆ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶುರುವಾಗಿ ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮದವರೆಗೆ ರೋಡ್ ನಡೆಸಲಾಗುತ್ತೆ. ಅಲ್ಲಿಂದ ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್ ಬರಲಿರುವ ರೋಡ್ ಮಲ್ಲೇಶ್ವರಂನ ಸ್ಯಾಂಕಿಟ್ಯಾಂಕ್‍ನಲ್ಲಿ ಮುಕ್ತಾಯವಾಗಲಿದೆ.

ಯಾವ ಕ್ಷೇತ್ರದಲ್ಲಿ ಮೋದಿ ಮೇನಿಯಾ..?:
1. ಬೆಂಗಳೂರು ದಕ್ಷಿಣ
2. ಜಯನಗರ
3. ಪದ್ಮನಾಭನಗರ
4. ಬಸವನಗುಡಿ
5. ಚಾಮರಾಜಪೇಟೆ
6. ಚಿಕ್ಕಪೇಟೆ
7. ಗಾಂಧಿನಗರ
8. ಗೋವಿಂದರಾಜನಗರ
9. ರಾಜಾಜಿನಗರ
10. ಮಹಾಲಕ್ಷ್ಮಿಲೇಔಟ್
11. ಮಲ್ಲೇಶ್ವರಂ

narendra modi 3 2

ಬೆಂಗಳೂರಲ್ಲಿ ಮೋದಿ ಮತ್ತೆ ಈ ರೋಡ್ ಶೋಗೆ ಪ್ಲ್ಯಾನ್ ಮಾಡಿರೋ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಮೋದಿ ರೋಡ್ ಇಂದ ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಭಾವ ಬೀರೋದು ಪಕ್ಕಾ ಆಗಿದೆ.

ಒಟ್ಟಿನಲ್ಲಿ ಈ ರಸ್ತೆಯಲ್ಲೆಲ್ಲಾ ರೋಡ್ ಶೋ ನಡೆಸೋ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ಅಲೆ ಎಬ್ಬಿಸಲು ಕೇಸರಿ ಪಡೆ ಪ್ಲಾನ್ ಮಾಡ್ಕೊಂಡಿದೆ. ಇದಕ್ಕೆ ಪ್ರಧಾನಿ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.

Share This Article