ಬೆಂಗಳೂರು: ಪ್ರಧಾನಿ ಮೋದಿಯಿಂದ (narendra modi) ಸಣ್ಣ ಸಣ್ಣ ಸಮುದಾಯಗಳ ಸೋಶಿಯಲ್ ಎಂಜಿನಿಯರಿಂಗ್ ಗೇಮ್ ಪ್ಲ್ಯಾನ್ ನಡೆದಿದೆ. ತುಮಕೂರಿನಲ್ಲಿ ಚಿಕ್ಕ ಸಮುದಾಯಗಳ ಹೆಸರು ಹೇಳಿದ ಮೋದಿ ತಂತ್ರದ ಗುಟ್ಟಿನ ಬಗ್ಗೆ ಚರ್ಚೆ ನಡೆದಿವೆ. ರಾಜ್ಯ ರಾಜಕಾರಣದಲ್ಲಿ ಮತ ವಿಭಜನೆ ಸಮರ ಜೋರಾಗಿದ್ದು, ಯಾರಿಗೆ ವರ ಎಂಬ ಕುತೂಹಲ ಇದೆ.
ಕರ್ನಾಟಕದಲ್ಲಿ ಮತ ವಿಭಜನೆಗೆ ಪಿಚ್ ಟೆಸ್ಟ್ ಮಾಡಲು ಕುಮಾರಣ್ಣ (HD Kumaraswamy) ಅಖಾಡಕ್ಕಿಳಿದಿರುವುದು ಸ್ಪಷ್ಟವಾಗಿದೆ. ಲಿಂಗಾಯತ ಮತ ವಿಭಜನೆ ಮೇಲೆ ಕಾಂಗ್ರೆಸ್, ಜೆಡಿಎಸ್ ಕಣ್ಣಿಟ್ಟಿದ್ದು, ಯಾರಿಗೆಷ್ಟು ಲಾಭ!? ಎಂಬ ಲೆಕ್ಕಚಾರವೂ ಶುರುವಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವದ ನಿರ್ಗಮನದ ನಂತರ ಲಿಂಗಾಯತ ಮತ ವಿಭಜನೆ ನಿರೀಕ್ಷೆ ಮಾಡುತ್ತಿವೆ ವಿಪಕ್ಷಗಳು. ಯಡಿಯೂರಪ್ಪ ನಂತರ ಲಿಂಗಾಯತ ನಾಯಕತ್ವ ಪಟ್ಟಕ್ಕೆ ಬಿಜೆಪಿ (BJP), ಕಾಂಗ್ರೆಸ್‌ನಲ್ಲೂ (Congress) ಪೈಪೋಟಿ ಹೆಚ್ಚಿದೆ. ಇದೇ ವೇಳೆ ನವಗ್ರಹ ಎಂದು ಕುಟುಂಬವನ್ನು ಕೆಣಕಿದ ಪ್ರಹ್ಲಾದ್ ಜೋಶಿಗೆ (Pralhad Joshi) ಬ್ರಾಹ್ಮಣ ಸಿಎಂ ಬಾಂಬ್ ಹಾಕಿದ ಹೆಚ್‌ಡಿಕೆ, ಬಿಜೆಪಿಯಲ್ಲಿ ಲಿಂಗಾಯತ, ಒಕ್ಕಲಿಗ ನಾಯಕತ್ವ ಮೂಲೆ ಗುಂಪಾಗುತ್ತದೆ ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ ಎಂಬ ವಾದವೂ ಇದೆ.
ಈ ನಡುವೆ ಕುಮಾರಸ್ವಾಮಿ ಲೆಕ್ಕಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದಲೇ ಬ್ರಹ್ಮಾಸ್ತ್ರ ಪ್ರಯೋಗವಾಗಿದೆ. ತುಮಕೂರಿನ ಸಮಾವೇಶದಲ್ಲಿ ಸಣ್ಣ ಸಣ್ಣ ಸಮುದಾಯಗಳ ಹೆಸರು ಪ್ರಸ್ತಾಪಿಸಿದ ನರೇಂದ್ರ ಮೋದಿ, ದೊಡ್ಡ ದೊಡ್ಡ ಜಾತಿಗಳನ್ನು ಮುಂದಿಟ್ಟು ಮಾಡುವ ರಾಜಕೀಯಕ್ಕೆ ಸೈಲೆಂಟ್ ಆಗಿಯೇ ತಿರುಗೇಟು ಕೊಟ್ಟಿರುವುದು ಸ್ಪಷ್ಟ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‌ನಿಂದ ಪೊಲಿಟಿಕಲ್ ಸುದರ್ಶನ ಚಕ್ರ ಬಾಕಿ ಇದೆಯಾ?
ವಿಶ್ವಕರ್ಮ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಬಡಗಿ, ಗಾರೆ ಕೆಲಸಗಾರರನ್ನು ನೆನಪಿಸಿಕೊಂಡ ಮೋದಿ, ಸಣ್ಣ ಸಣ್ಣ ಸಮುದಾಯಗಳಿಗೂ ಯೋಜನೆ ತಂದಿದ್ದೇವೆ ಎಂಬ ಸಂದೇಶ ಸಾರಿದ್ದಾರೆ. ಕೇವಲ ಪ್ರಬಲ ಸಮುದಾಯಗಳಷ್ಟೇ ಅಲ್ಲ ಸಣ್ಣ ಸಮುದಾಯಗಳು ನಮ್ಮ ಜೊತೆ ಇರಬೇಕೆಂಬ ತಂತ್ರ ಪ್ರಧಾನಿಯದ್ದು ಎಂಬ ವಾದವೂ ಇದೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿಯವರ ಸೈಲೆಂಟ್ ಸೋಶಿಯಲ್ ಎಂಜಿನಿಯರಿಂಗ್‌ನಿಂದ ಹೆಚ್‌ಡಿಕೆ ಅಸ್ತ್ರದ ಓಟಕ್ಕೆ ಬ್ರೇಕ್ ಬೀಳುತ್ತಾ? ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಕೋಟೆನಾಡಲ್ಲಿ ದಂಡ ಪಾವತಿಸಲಾಗದೇ ಜೈಲು ಸೇರಿದ ಬೈಕ್ ಸವಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k