ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಇಂದು (ಮಂಗಳವಾರ) ತಮ್ಮ ಪಕ್ಷದ ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಪಾದಯಾತ್ರೆ ಮೂಲಕ ತೆರಳಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕೆಆರ್‌ಪಿಪಿ (KRPP) ಅಧಿಕಾರಕ್ಕೆ ಬಂದರೇ ರೈತರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
Advertisement
Advertisement
ಜನಾರ್ದನ ರೆಡ್ಡಿ ಪಕ್ಷದ ರೈತ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ಪ್ರತಿ ರೈತನ ಅಕೌಂಟ್‌ಗೆ 15 ಸಾವಿರ ಹಣ ಜಮಾ ಮಾಡಲಾಗುವುದು. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು, ನೀರಾವರಿ ಯೋಜನೆ ಸದೃಢಗೊಳಿಸಲಾಗುತ್ತದೆ. ಸಕಾಲಕ್ಕೆ ರಸ ಗೊಬ್ಬರಗಳನ್ನು ರೈತರಿಗೆ ನೀಡಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ರಾಜ್ಯದ ಶೈಕ್ಷಣಿಕ ಸಾಧನೆಗೆ ಮಠಗಳೇ ಕಾರಣ – ಸರ್ಕಾರದ ಕೆಲಸವನ್ನ ಮಠಗಳೇ ಮಾಡ್ತಿವೆ ಎಂದ ಸಿಎಂ
Advertisement
Advertisement
ಇದೇ ಸಂದರ್ಭದಲ್ಲಿ ಜನಾರ್ದನರೆಡ್ಡಿ ಪಾದಯಾತ್ರೆಗೆ ಬಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ನೀಡಿದರು. ಅಂಬಾಮಠದ ಬಳಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರು ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ ಸುಮಾರು 20 ಸಾವಿರ ಜನರಿಗೆ ಭರ್ಜರಿ ಬಾಡೂಟ ಸಿದ್ಧ ಮಾಡಲಾಗಿತ್ತು. ಬಾಡೂಟಕ್ಕೆ ಒಂದು ಕ್ವಿಂಟಾಲ್ ಕೋಳಿ, 51 ಕುರಿಮರಿಗಳ ಬಳಕೆ ಮಾಡಲಾಗಿದ್ದು, ಚಿಕನ್, ಮಟನ್ ಬಿರಿಯಾನಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಡೇಟಿಂಗ್ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k