ಬೆಳಗಾವಿ: ಸುದೀಪ್ (Sudeep) ಬಂದು ಬಿಜೆಪಿ (BJP) ಪರವಾಗಿ ಪ್ರಚಾರ ಮಾಡಿದ ತಕ್ಷಣ ಪೆಟ್ರೋಲ್ (Petrol) ಬೆಲೆ ಹಾಗೂ ಬೆಲೆ ಏರಿಕೆ ಕಡಿಮೆ ಆಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಗೋಕಾಕಿನಲ್ಲಿ (Gokak) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಯಾವುದೇ ಪಕ್ಷ ಸೇರಲು ಸ್ವಾತಂತ್ರ್ಯ ಹೊಂದಿದ್ದಾರೆ. ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲು ಸಹ ಅವರಿಗೆ ಸ್ವತಂತ್ರ್ಯ ಇದೆ. ಸುದೀಪ್ ಬಂದು ಪ್ರಚಾರ ಮಾಡಿದ ತಕ್ಷಣ ಗಗನಕ್ಕೇರಿದ ಬೆಲೆ ಕಡಿಮೆ ಆಗುವುದಿಲ್ಲ. ಪಕ್ಷಕ್ಕೆ ಸೇರುವುದಿಲ್ಲ ಎಂದು ಅವರು ಹೇಳಿದ್ದನ್ನು ನೋಡಿದ್ದೇನೆ. ಹಿಂದೆ ಸಹ ಸುದೀಪ್ ಪ್ರಚಾರದಲ್ಲಿ ಭಾಗಿಯಾಗಿದ್ದನ್ನು ನೋಡಿದ್ದೇನೆ. ಈಗ ಮತ್ತೆ ರಾಜಕೀಯಕ್ಕೆ ಬಂದು ಗೊಂದಲ ಶುರುವಾಗಿದೆ. ಸುದೀಪ್ ಅಭಿಮಾನಿಗಳು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷದಲ್ಲಿದ್ದಾರೆ. ಇದರಿಂದ ಅವರೇ ಸಮಸ್ಯೆಗೆ ಸಿಲುಕಲಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಪ್ರೀತಂ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ
Advertisement
Advertisement
ಎಸ್‍ಟಿ ಸಮುದಾಯದ ಮತ ಸೆಳೆಯಲು ಸುದೀಪ್ ಅವರಿಂದ ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಚುನಾವಣೆ (Election) ಗೆಲ್ಲಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ಮೀಸಲಾತಿ ವಿಚಾರದಲ್ಲಿ ನಾವು ನೋಡಿದ್ದೇವೆ. ಕೇಳಿದವರಿಗೆಲ್ಲ ನಿಗಮ ಕೊಟ್ಟು ಅದಕ್ಕೆ ಹಣ ಇರದ ರೀತಿ ಮಾಡಿದ್ದಾರೆ. ಕೆಲವು ನಿಗಮಗಳಿಗೆ ಅತೀ ಕಡಿಮೆ ಹಣ ನೀಡಿದ್ದಾರೆ. ಈ ಹಿಂದೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಬಹಳ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಅದರಲ್ಲಿ ಯಶಸ್ವಿ ಕೂಡ ಆಗಿದ್ದರು. ಈಗ ಸುದೀಪ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಹೇಳಿದರೂ ಆಶ್ಚರ್ಯವಿಲ್ಲ. ಸರ್ಕಾರಗಳು ವಿಫವಾದಾಗ ಈ ಬಗೆಯ ಕಾರ್ಯಕ್ಕೆ ಮುಂದಾಗುತ್ತವೆ ಜನ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದಿದ್ದಾರೆ.
Advertisement
Advertisement
ರಾಯಭಾಗ ಹಾಗೂ ಸವದತ್ತಿಯಲ್ಲಿ ಬಂಡಾಯ ತಣ್ಣಗಾಗಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿಯೂ ಸಾಕಷ್ಟು ಜನ ಸಮರ್ಥರಿದ್ದಾರೆ ಹೊಂದಾಣಿಕೆ ಆದರೆ ಉತ್ತಮ. ಬಂಡಾಯ ಆಗಬಾರದು ಎಂದು ಸಂಧಾನಕ್ಕೆ ಪ್ರಯತ್ನ ನಡೆಯುತ್ತಿದೆ. ಯಮಕನಮರಡಿಯಲ್ಲಿ ನನ್ನ ವಿರುದ್ಧ ಬಾಲಚಂದ್ರ ಜಾರಕಿಹೊಳಿ ಸ್ಪರ್ಧೆ ಮಾಡುವುದು ಬಿಜೆಪಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ – ಡಿಕೆಶಿ ವಿರುದ್ಧ ರಘು ಆಚಾರ್ ಕಿಡಿ