ರಾಮನಗರ: ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಅತ್ತೆ-ಸೊಸೆ ಜಗಳವಾಡುವ ಕೆಲಸ ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣ (Channapatna) ದ ಶೇರು ಸರ್ಕಲ್ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ (Bajarangdal) ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ವಾ.? ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು ಅಂದ್ರೆ ಅದು ಜೆಡಿಎಸ್ (JDS) ನಿಂದ ಮಾತ್ರ ಸಾಧ್ಯ ಎಂದರು.
ಕಾಂಗ್ರೆಸ್ ಪ್ರಣಾಳಿಯಲ್ಲಿ ಜೆಡಿಎಸ್ ಪ್ರಣಾಳಿಕೆ ಅಂಶ ಕಾಪಿಮಾಡಿರುವ ವಿಚಾರಕ್ಕೆ ರಿಯಾಕ್ಟ್ ಮಾಡಿ, ಅದು ನೂರಕ್ಕೆ ನೂರರಷ್ಟು ಸತ್ಯ. ಅವರು ನಮ್ಮನ್ನೇ ಅನುಕರಣೆ ಮಾಡಬೇಕು. ಅದನ್ನ ಬಿಟ್ರೆ ಹೇಳೋಕೆ ಬೇರೆ ಏನಿದೆ?. ಎಕರೆಗೆ 10 ಸಾವಿರ, ಒಂದು ಮನೆಗೆ 2 ಸಾವಿರ ಕೊಡ್ತೀನಿ ಅಂತ ಹೇಳಿ ಅತ್ತೆ ಸೊಸೆಗೆ ಗಲಾಟೆ ತಂದಿಡ್ತಿದ್ದಾರೆ. ಅತ್ತೆಗೆ ಕೊಡ್ತಾರೋ, ಸೊಸೆಗೆ ಕೊಡ್ತಾರೋ. ಈಗ ನಾವು 65 ವರ್ಷ ವಯಸ್ಸಾದ ಮೇಲೆ 5 ಸಾವಿರ ಕೊಡ್ತೀವಿ ಅಂತ ಅಂದರು.
ಜೆಡಿಎಸ್‍ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್ ಗೆ ವೋಟ್ ಹಾಕಿದ ಹಾಗೆ ಎಂಬ ಮೋದಿ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ-ಕಾಂಗ್ರೆಸ್ ಇಬ್ರೂ ದಾಯಾದಿಗಳ ಮಕ್ಕಳು. ಜನಕ್ಕೆ ಎಲ್ಲವೂ ಗೊತ್ತಾಗುತ್ತೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಕನ್ನಡಿಗರು. ಕನ್ನಡಿಗರ ಸ್ವಾಭಿಮಾನ ಉಳಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ
ಚನ್ನಪಟ್ಟಣಕ್ಕೆ ನೀರು ಕೊಟ್ಟಿದ್ದು ಯಾರು?, ಬೆಂಗಳೂರಿಗೆ ಕಾವೇರಿ ನೀರು ಕೊಟ್ಟಿದ್ದು ಯಾರು..?, 92 ವರ್ಷ ವಯಸ್ಸಾದರೂ ರಾಜ್ಯದ ಜನತೆಗೆ ಇಂದಿಗೂ ಹೋರಾಡುತ್ತಿದ್ದಾರೆ. ಚನ್ನಪಟ್ಟಣ ಕುಮಾರಸ್ವಾಮಿ ಕ್ಷೇತ್ರ. ಚನ್ನಪಟ್ಟಣ ಮತ್ತೊಮ್ಮೆ ಕರ್ನಾಟಕದ ಕಿರೀಟ ಆಗಬೇಕು. ದೇಶದ ಭೂಪಟದಲ್ಲಿ ಚನ್ನಪಟ್ಟಣ ರಾರಾಜಿಸಬೇಕು. ಅತ್ತೆ ಸೊಸೆ ಜಗಳವಾಡು ಕೆಲವಸನ್ನ ಕಾಂಗ್ರೆಸ್ ಪ್ರಣಾಳಿಕೆ ಮಾಡಿದೆ. ಯೋಗೇಶ್ವರ್ (Yogeshwar) ನೀನು ಯಾವ ಪಾರ್ಟಿಯಲ್ಲಿರು ಆದರೆ ಗೌಡರಿಗೆ ಗೌರವ ಕೊಡುವುದನ್ನ ಕಲಿ. ಮೋದಿ ರೀತಿ ನಾವು ರೋಡ್ ಶೋ ಮಾಡಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಯಲ್ಲೂ ನಾನು ಕುಮಾರಸ್ವಾಮಿ ಸುತ್ತಾಡಿದ್ದೇವೆ. ಮುಸ್ಲಿಮರು ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಕುಮಾರಸ್ವಾಮಿ (HD Kumaraswamy) ಯನ್ನ ಬೆಂಬಲಿಸದರೆ ಮುಸ್ಲಿಂ ಪರ ನಿಲ್ಲಲಿದ್ದಾರೆ. ಮುಸ್ಲಿಮರಿಗೆ 4% ಮೀಸಲಾತಿ ಕೊಟ್ಟಿದ್ದು, ಹುಬ್ಬಳ್ಳಿ ಈದ್ಗಾ ಮೈದಾನ (Hubballi Idgha Maidan) ವಿವಾದ ಬಗ್ಗೆ ಹರಿಸಿದ್ದು ದೇವೇಗೌಡ್ರು. ಮೀಸಲಾತಿ, ಹಿಜಬ್, ಹಲಾಲ್ ನಿಷೇಧ ಹೇರುವುದನ್ನ ವಿರೋಧಿಸಿದ್ದು ಕುಮಾರಸ್ವಾಮಿ ಎಂದರು.