ಬೀದರ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧಿಕಾರಕ್ಕೆ ಬಂದಾಗ 2 ವರ್ಷ 10 ಕೆಜಿ ಅಕ್ಕಿ ಕೊಟ್ಟರು, 13 ಲಕ್ಷ ಮನೆಗಳನ್ನ ಕರ್ನಾಟಕಕ್ಕೆ ಮಂಜೂರು ಮಾಡಿದರು. 3 ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಮೂಲಕ 54 ಲಕ್ಷ ರೈತರಿಗೆ ನೆರವು ನೀಡುವಂತೆ ಮಾಡಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮೋದಿ ಸಾಧನೆಯನ್ನ ಹಾಡಿಹೊಗಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರ ಬೀದರ್ ಜಿಲ್ಲೆಯ ಭಾಗಕ್ಕೆ ಜವಳಿ ಕಾರ್ಖಾನೆ ಸೇರಿದಂತೆ ಹಲವು ಯೋಜನೆಗಳ ಕೊಡುಗೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧಮ್ ಇದ್ರೆ ನನ್ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್
ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (DK Shivakumar) ಲಿಂಗಾಯತ ಮುಖ್ಯಮಂತ್ರಿಗಳನ್ನ ಭ್ರಷ್ಟರು ಎನ್ನುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಮೋದಿ ಅವರ ಬಗ್ಗೆ ಖರ್ಗೆ ಅವರು ಕೇವಲವಾಗಿ ಮಾತನಾಡಿದ್ದಾರೆ. ಮೋದಿಗೆ ಯಾರು ಸಮಾನರಿಲ್ಲ. ನರೇಂದ್ರ ಮೋದಿ ಅಂದ್ರೆ ಕಾಂಗ್ರೆಸ್‌ಗೆ ಸೋಲು, ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲಲಿದೆ. ಬೀದರ್‌ನ ಎಲ್ಲ ಕ್ಷೇತ್ರಗಳಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕುಟುಂಬದ ನಡುವೆ ಬೇರೆ ಒಂದು ಮುಖವಿರಲಿ ಎಂದು ಇಬ್ರಾಹಿಂಗೆ ಮಣೆ: ಈಶ್ವರಪ್ಪ ವ್ಯಂಗ್ಯ
ಬಸವಣ್ಣನವರ ಅನುಭವ ಮಂಟಪ ಬೀದರ್ ಜಿಲ್ಲೆಯಲ್ಲಿದೆ. ಪ್ರಜಾಪ್ರಭುತ್ವ ಮೂಲವನ್ನ ಪ್ರಧಾನಿ ನರೇಂದ್ರ ಮೋದಿ ಗುರುತಿಸಿದರು. ಆದ್ರೆ ಅನುಭವ ಮಂಟಪದ ಉದ್ದೇಶ ಕಾಂಗ್ರೆಸ್ ಈಡೇರಿಸಲಿಲ್ಲ, ಸಮಾನತೆ ನೀಡಲಿಲ್ಲ. ಆದ್ರೆ ಬಿಜೆಪಿ ಮೀಸಲಾತಿ ಮೂಲಕ ಎಲ್ಲರಿಗೂ ಸಮಾನತೆ ನೀಡಿದೆ. ಬಡವರು ದೀನ ದಲಿತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನ ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಮೋದಿ ಗುಣಗಾನ ಮಾಡಿದರು.