ಯಾದಗಿರಿ: ಸಿದ್ದರಾಮಯ್ಯಗೆ ಕೋಲಾರದಲ್ಲಿ (Kolar) ಸ್ಪರ್ಧಿಸುವುದು ಬೇಡ ಎಂದು ರಾಹುಲ್ ಗಾಂಧಿ ಹೇಳುವುದು ತಪ್ಪು ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪರ ಬಿಜೆಪಿ ಶಾಸಕ ರಾಜುಗೌಡ (Raju Gowda) ಬ್ಯಾಟ್ ಬೀಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ (Congress) ಪಕ್ಷದ ಪ್ರಮುಖ ನಾಯಕರು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್‌ನವರೇ ಹುನ್ನಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಯೇ ಕೋಲಾರಕ್ಕೆ ಹೋಗಿದ್ದರು. ಕೋಲಾರದಲ್ಲಿ ನಿಲ್ಲುವ ಬಗ್ಗೆ ಘೋಷಣೆ ಮಾಡಿ, ಹಲವು ಸಭೆಗಳನ್ನು ಮಾಡಿದ್ದಾರೆ. ಘೋಷಣೆಗೂ ಮುನ್ನ ಬೇಡ ಎಂದರೆ ಸರಿಯಿತ್ತು. ಆದರೆ ಈಗ ರಾಹುಲ್ ಗಾಂಧಿ (Rahul Gandhi) ಅವರು ಸಿದ್ದರಾಮಯ್ಯಗೆ ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ ಎನ್ನುವುದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: 5 ವರ್ಷದಲ್ಲಿ ಎನ್‍ಜಿಓಗಳಿಗೆ 89,000 ಕೋಟಿ ರೂ. ವಿದೇಶಿ ನಿಧಿ- ಕರ್ನಾಟಕಕ್ಕೆ 2ನೇ ಸ್ಥಾನ
ರಾಜಕೀಯವಾಗಿ ಎತ್ತರಕ್ಕೆ ಬೆಳೆದಾಗ ಸ್ವಪಕ್ಷದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅವರ ಪಕ್ಷದವರೇ ಸೋಲಿಸಲು ಪ್ಲ್ಯಾನ್ ಮಾಡುತ್ತಿರಬಹುದು. ಇದು ರಾಹುಲ್ ಗಾಂಧಿಗೆ ಮೆಸೇಜ್ ತಲುಪಿ ಈ ರೀತಿ ಹೇಳಿರಬಹುದು. ಆದರೆ ಕೋಲಾರದಲ್ಲಿ ಸ್ಪರ್ಧೆ ಬೇಡ ಅನ್ನೋದು ತಪ್ಪು, ಅವರೊಬ್ಬ ದೊಡ್ಡ ನಾಯಕರು. ದೇವೆಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇಂತವರಿಗೆ ಕ್ಷೇತ್ರದ ಬಗ್ಗೆ ಬೇಡ ಎನ್ನುವುದು ತಪ್ಪು ಎಂದರು. ಇದನ್ನೂ ಓದಿ: ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?