ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ

Public TV
2 Min Read
NY GOPALAKRISHNA

ಚಿತ್ರದುರ್ಗ: ಬಿಜೆಪಿ (BJP) ನನ್ನ ಬಾಡಿಗೆ ಮನೆಯಾಗಿದ್ದು, ಸ್ವಂತಮನೆಯಾದ ಕಾಂಗ್ರೆಸ್‌ಗೆ (Congress) ವಾಪಸ್ ತೆರಳಲು ಸಿದ್ಧತೆ ನಡೆಸಿದ್ದೇನೆ ಎಂದು ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (N.Y.Gopalakrishna) ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿರುವ (Chitradurga) ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನನಗೆ ಹಲವರಿಂದ ಸಮಸ್ಯೆಗಳಿದ್ದವು. ಈ ಬಗ್ಗೆ ಹಲವು ಬಾರಿ ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬಾಡಿಗೆ ಮನೆಯಂತಿದ್ದ ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣದಲ್ಲಿ ಐದು ವರ್ಷ ಕಳೆದಿದ್ದೇನೆ. ಈ ಬಾರಿ ಮೊಳಕಾಲ್ಮೂರು (Molakalmuru) ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಖಾಯಂ ಮನೆಯಾದ ಕಾಂಗ್ರೆಸ್‌ಗೆ ಮರಳಲಿದ್ದೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ – ಡಿಕೆಶಿಗೆ ಬಿಜೆಪಿ, ಜೆಡಿಎಸ್‍ನಿಂದ ಮಾಸ್ಟರ್ ಸ್ಟ್ರೋಕ್! 

NY GOPALAKRISHNA 1

ಗೋಪಾಲಕೃಷ್ಣ ಸೇರ್ಪಡೆಗೆ ವೇದಿಕೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ. ಎನ್‌ವೈ ಗೋಪಾಲಕೃಷ್ಣ ಸ್ಪರ್ಧೆಗೆ ಮೊಳಕಾಲ್ಮೂರು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವರಿಗೆ ಮಣೆ ಹಾಕದಂತೆ ಕಳೆದ ಬಾರಿ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಯೋಗೀಶ್ ಬಾಬು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್ – ಇಂದು ಹೆಚ್‌ಡಿಕೆ, ರೇವಣ್ಣ ಸಂಧಾನ

ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಗೋಪಾಲಕೃಷ್ಣ ಅವರು, ನಾನು ಕೂಡಾ ಲೋಕಲ್ ಅಭ್ಯರ್ಥಿ, ಹುಟ್ಟಿದಾಗಿನಿಂದ ಇದೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬೆಳೆದಿದ್ದೇನೆ. ಅನಿವಾರ್ಯವಾಗಿ ಬೇರೆ ಕ್ಷೇತ್ರಕ್ಕೆ ಹೋಗಿದ್ದೆ. ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಗೋಬ್ಯಾಕ್ ಗೋಪಾಲಕೃಷ್ಣ ಎನ್ನುವ ನೈತಿಕ ಹಕ್ಕಿಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡುವುದು ಸಣ್ಣತನವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತದಿಂದ 85 ದೇಶಗಳಿಗೆ ರಕ್ಷಣಾ ಸಾಮಾಗ್ರಿ ರಫ್ತು – 1,5920 ಕೋಟಿ ದಾಖಲೆ 

BJP Congress

2018ರಲ್ಲಿ ನನಗೆ ಟಿಕೆಟ್ ತಪ್ಪಿದಾಗ ನಾನು ಹೀಗೆ ಅಸಹ್ಯ ವಾತಾವರಣ ನಿರ್ಮಿಸಲಿಲ್ಲ. ಇದು ಮೊಳಕಾಲ್ಮೂರು ಸ್ವಾಭಿಮಾನ ಹಾಗು ಗೌರವದ ಪ್ರಶ್ನೆ. ಮೊಳಕಾಲ್ಮೂರು ಗೌರವವನ್ನು ಯಾರೂ ಕಳೆಯಬಾರದು ಎಂದು ವಿರೋಧಿಗಳಿಗೆ ಟಾಂಗ್ (Tong) ಕೊಟ್ಟರು. ಇದನ್ನೂ ಓದಿ: ರೇವಣ್ಣ ಆರೋಪಕ್ಕೆ ಬೇಸತ್ತು ವರ್ಗಾವಣೆ ಕೋರಿದ ಡಿವೈಎಸ್‌ಪಿ

Share This Article