ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬಿಜೆಪಿಗೆ ಆಡಳಿತ ವಿರೋಧಿ ಅಲೆ ಸವಾಲು ಎದುರಾಗಿದೆ.
ವಿಧಾನಸಭಾ ಚುನಾವಣೆಯ (Karnataka Election) ಹಿನ್ನೆಲೆಯಲ್ಲಿ ಬಿಜೆಪಿ (BJP) ಆಂತರಿಕ ಸಮೀಕ್ಷೆ ನಡೆಸಿತ್ತು. ಈ ಪೈಕಿ ಗೆದ್ದ 15 ಬಿಜೆಪಿ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ವ್ಯಕ್ತವಾಗಿದೆ.
Advertisement
ರಸ್ತೆಗುಂಡಿ, ಮಳೆ ಪ್ರವಾಹ, ಮಳೆ ಹಾನಿ, ಒಳಚರಂಡಿ ಅವ್ಯವಸ್ಥೆ, ಫುಟ್ಪಾತ್, ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ಜನ ತತ್ತರಿಸುವ ವಿಚಾರ ತಿಳಿದು ಬಂದಿದೆ.
Advertisement
Advertisement
ಮಳೆ ನಿಂತ ಕೂಡಲೇ ಚುನಾವಣೆ ಸಮೀಪ ಆತುರಾತುರವಾಗಿ ಹಲವು ಕಾಮಗಾರಿಗಳನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಆದರೆ ಪೂರ್ಣಗೊಳಿಸಿದ ಕಾಮಗಾರಿಗಳು ಸರಿಯಾಗಿ ನಡೆಯದ ಬಗ್ಗೆ ಜನರ ಅಸಮಾಧಾನ ಇರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?
Advertisement
ಈ ಕಾರಣಕ್ಕೆ ಜನಾಕ್ರೋಶ ತಣಿಸಲು ಬೆಂಗಳೂರಿಗೆ ಮೋದಿ (Narendra Modi) ಅವರನ್ನು ಪದೇ ಪದೇ ಕರೆ ತರಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಸೋಮವಾರದ ಏರೋ ಇಂಡಿಯಾ ಶೋ ಉದ್ಘಾಟನಾ ಭಾಷಣದಲ್ಲಿ ಮೋದಿ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಬಣ್ಣಿಸುವ ಸಾಧ್ಯತೆಯಿದೆ.
ಕೇಂದ್ರ ಬಜೆಟ್ ಘೋಷಣೆ, ಅನುದಾನಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. ಅಭಿವೃದ್ಧಿ ಮಂತ್ರ ಜಪಿಸುವ ಮೂಲಕ ಮೋದಿ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k