ಬೆಳಗಾವಿಯ 11ರಲ್ಲಿ ಕಾಂಗ್ರೆಸ್ ಗೆಲುವಿನ ನಗೆ – 7 ಕಡೆ ಬಿಜೆಪಿಗೆ ಜಯ

Public TV
3 Min Read
BELAGAVI Karnataka Election Result 2023 Live Updates

ಬೆಳಗಾವಿ: 18 ಕ್ಷೇತ್ರಗಳ ಪೈಕಿ ಕಾಂಗ್ರೆಸ್ (Congress) 11ರಲ್ಲಿ ಜಯ ಸಾಧಿಸಿದರೆ ಬಿಜೆಪಿ (BJP) 7 ಕಡೆ ಗೆಲುವಿನ ನಗೆ ಬೀರಿದೆ.

ಬೆಳಗಾವಿ ಉತ್ತರ: ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಆಸಿಫ್ (ರಾಜು) ಸೇಟ್ ಗೆಲುವಿನ ನಗೆ ಬೀರಿದ್ದಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ. ರವಿ ಬಿ. ಪಾಟೀಲ್ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಆಪ್‌ನಿಂದ ರಾಜ್‌ಕುಮಾರ್ ಟೋಪಣ್ಣವರ್, ಜೆಡಿಎಸ್‌ನಿಂದ ಶಿವಾನಂದ್ ಎಂ ಮುಳಿಹಾಳ್ ಹಾಗೂ ಪಕ್ಷೇತರವಾಗಿ ಅಮರ್ ಕಿಸಾನ್ ಯಲ್ಲೂರಕರ್ ಸ್ಪರ್ಧಿಸಿದ್ದರು.

ಬೆಳಗಾವಿ ದಕ್ಷಿಣ: ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಅಭಯ್ ಪಾಟೀಲ್ ಭರ್ಜರಿ ಜಯ ಗಳಿಸಿದ್ದಾರೆ. ಬೆಳಗಾವಿ ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾವತಿ ಬಸವರಾಜ್ ಮಾಸ್ತರಡ್ಡಿ, ಆಪ್‌ನಿಂದ ನೂರಹಮ್ಮದ್ ಕುತುಬುದ್ದೀನ್ ಮುಲ್ಲಾ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರಮಾಕಾಂತ್ ಕೊಂಡೂಸ್ಕರ್ ಸ್ಪರ್ಧಿಸಿ ಸೋತಿದ್ದಾರೆ.

ಬೆಳಗಾವಿ ಗ್ರಾಮೀಣ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಜಯ ಗಳಿಸಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ನಾಗೇಶ್ ಅಣ್ಣಪ್ಪ ಮನೋಳ್ಕರ್ ಹಾಗೂ ಪಕ್ಷೇತರ ಅಭ್ಯರ್ಥಿ ಆರ್‌ಎಂ ಚೌಗುಲೆ ಸೋತಿದ್ದಾರೆ.

ಸವದತ್ತಿ: ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವಸಂತ್ ವೈದ್ಯ ಸವದತ್ತಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯಿಂದ ಮಾಮಣಿ ರತ್ನ ಆನಂದ ವಿಶ್ವನಾಥ್ ಹಾಗೂ ಜೆಡಿಎಸ್‌ನಿಂದ ಚೋಪ್ರಾ ಸೌರವ್ ಆನಂದ್ ಸ್ಪರ್ಧಿಸಿ ವಿಶ್ವಾಸ್ ವಸಂತ್ ವಿರುದ್ಧ ಸೋತಿದ್ದಾರೆ.

ಬೈಲಹೊಂಗಲ: ಕಾಂಗ್ರೆಸ್ ಅಭ್ಯರ್ಥಿ ಕೌಜಲಗಿ ಮಹಾಂತೇಶ್ ಶಿವಾನಂದ್ ಬಿಜೆಪಿ ಅಭ್ಯರ್ಥಿ ಜಗದೀಶ್ ಚನ್ನಪ್ಪ ವಿರುದ್ಧ ಅತ್ಯಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಂಕರ್ ಭರಮಪ್ಪ ಮಾಡಲಗಿ ಹಾಗೂ ಪಕ್ಷೇತರ ಅಭ್ಯರ್ಥಿ ಡಾ. ವಿಶ್ವನಾಥ್ ಪಾಟೀಲ್ ಸ್ಪರ್ಧಿಸಿದ್ದರು.

ಗೋಕಾಕ್: ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಕಡಾಡಿ ಮಹಾಂತೇಶ್ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ. ಆಪ್‌ನಿಂದ ಗೋಕಾಕ್ ಕ್ಷೇತ್ರದಲ್ಲಿ ಜೆಎಂ ಕರೆಪ್ಪಗೋಳ ಹಾಗೂ ಬಹುಜನ ಸಮಾಜ ಪಕ್ಷದಿಂದ ಬಿ ಲೋಹಿತ್ ಸ್ಪರ್ಧಿಸಿದ್ದಾರೆ.

ಅರಭಾವಿ: ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅರಭಾವಿ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅರವಿಂದ್ ಮಹದೇವರಾವ್ ದಳವಾಯಿ ಹೀನಾಯವಾಗಿ ಸೋತಿದ್ದಾರೆ.

ಕಿತ್ತೂರು: ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಪಾಟೀಲ್ ಬಿಜೆಪಿ ಅಭ್ಯರ್ಥಿ ದೊಡ್ಡಗೌಡರ ಮಹಾಂತೇಶ ಬಸವಂತರಾಯ್ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಖಾನಾಪುರ: ಬಿಜೆಪಿ ಅಭ್ಯರ್ಥಿ ವಿಠಲ ಸೋಮಣ್ಣ ಹಲಗೇಕರ್ ಖಾನಾಪುರ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದ್ದು ಭಾರೀ ಮತಗಳ ಅಂತರದಲ್ಲಿ ಸೋತಿದ್ದಾರೆ.

ರಾಮದುರ್ಗ: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮಹದೇವಪ್ಪ ಪಟ್ಟಣ್ ರಾಮದುರ್ಗದಲ್ಲಿ ಗೆಲುವು ಕಂಡಿದ್ದು, ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಸೋತಿದ್ದಾರೆ.

ನಿಪ್ಪಾಣಿ: ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಅನ್ನಸಾಹೆಬ್ ಜೊಲ್ಲೆ ವಿಜಯಶಾಲಿಯಾಗಿದ್ದು, ಕಾಂಗ್ರೆಸ್ ಪಕ್ಷದ ಕಾಕಾ ಸಾಹೇಬ್ ಪಾಟೀಲ್ ಸೋತಿದ್ದಾರೆ.

ಚಿಕ್ಕೋಡಿ ಸದಲಗ: ಚಿಕ್ಕೋಡಿ ಸದಲಗ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಗಣೇಶ್ ಹುಕ್ಕೇರಿ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಕತ್ತಿ ರಮೆಶ್ ವಿಶ್ವನಾಥ್ ಸೋಲುಂಡಿದ್ದಾರೆ.

ಅಥಣಿ: ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷ್ಮಣ್ ಸವದಿ ಭಾರೀ ಅಂತರದಿಂದ ಜಯಶಾಲಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

ಕಾಗಾವಾಡ: ಕಾಗಾವಾಡ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಭರಮ ಗೌಡ ಆಲಮಗೌಡ ಕಾಗೆ ಗೆಲುವನ್ನು ಸಾಧಿಸಿ, ಬಿಜೆಪಿಯ ಶ್ರೀಮಂತ್ ಬಾಲಾಸಾಹೇಬ್ ಸೋತಿದ್ದಾರೆ.

ಕುಡಚಿ: ಕುಡಚಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ಕಲ್ಲಪ್ಪ ತಮ್ಮಣ್ಣ ಗೆಲುವನ್ನು ಕಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಪಿ.ರಾಜೀವ್ ಸೋಲನ್ನು ಅನುಭವಿಸಿದ್ದಾರೆ.

ರಾಯಬಾಗ: ರಾಯಬಾಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಮಹಾವೀರ ಲಕ್ಷ್ಮಣ ಸೋತಿದ್ದಾರೆ.

ಹುಕ್ಕೇರಿ: ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕತ್ತಿ ನಿಖಿಲ್ ಉಮೇಶ್ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಬಿ.ಪಾಟೀಲ್ ಸೋಲನ್ನು ಅನುಭವಿಸಿದ್ದಾರೆ.

ಯಮಕನಕರಡಿ: ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿ ಗೆಲುವನ್ನು ಸಾಧಿಸಿದ್ದು, ಬಿಜೆಪಿಯ ಬಸವರಾಜ್ ಹುಂದ್ರಿ ಸೋಲುಂಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ LIVE Updates

Share This Article