ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election) ಗೆ ದಿನಗಣನೇ ಆರಂಭವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಅಕ್ಷರಶಃ ರಣಾಂಗಣವಾಗಿದೆ. ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ರಮೇಶ್, ಮತ್ತೊಂದು ಸಮಾವೇಶ ನಡೆಸಿದರು. ಇದೇ ವೇಳೆ ಲಕ್ಷ್ಮಿ ವಿರುದ್ಧ ಗುಡುಗಿದ ರಮೇಶ್, ಸಮಾವೇಶ ನೆಪದಲ್ಲಿ ಬಾಡೂಟ ಹಾಕಿಸಿದರು.
Advertisement
ಹೌದು. ಒಂದು ಕಾಲದಲ್ಲಿ ಆಪ್ತರಾಗಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಇಂದು ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಗೆಲುವಿಗೆ ಶ್ರಮಿಸಿದ್ದ ರಮೇಶ್, ಇಂದು ಅದೇ ಲಕ್ಷ್ಮಿ ಸೋಲಿಸಲು ಶಪಥ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಲಕ್ಷ್ಮಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿರುವ ರಮೇಶ್ ಕೂಡ ಮತ್ತೊಂದು ಸಮಾವೇಶ ನಡೆಸಿ ಉಚಗಾಂವ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾರೆ. ಸಾವಿರಾರು ಜನರು ಬಾಡೂಟ ಸವಿಯಲು ಮುಗಿಬಿದ್ದಿದ್ರು. ರಮೇಶ್ ಜಾರಕಿಹೊಳಿ ಹಾಗೂ ಆಪ್ತ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆಯೂ ರಮೇಶ್ ಹಿಂಡಲಗಾ, ಸುಳೇಭಾವಿ, ಹಿರೇಬಾಗೇವಾಡಿಯಲ್ಲಿ ಸಭೆ ಮಾಡಿದ್ದರು.
Advertisement
Advertisement
ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ‘ಎಂಇಎಸ್’ (MES) ಅಸ್ತ್ರ ಪ್ರಯೋಗಿಸಿದ್ದಾರೆ. ಬಿಜೆಪಿ ಬೆಂಬಲಿಸುವಂತೆ ನಾಡದ್ರೋಹಿ ಎಂಇಎಸ್‍ಗೆ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಎಂಇಎಸ್ ನಲ್ಲಿ ಮನವಿ ಮಾಡ್ತೀನಿ, ಬಿಜೆಪಿಗೆ ಸಪೋರ್ಟ್ ಮಾಡಬೇಕು. ಎರಡು ಮರಾಠಾ ಅಭ್ಯರ್ಥಿ ಆದರೆ ದೋಖಾ ಆಗುತ್ತೆ. ಗಡಿವಿವಾದ ಸಂಬಂಧ ನಿಮ್ಮ ಕೇಸ್ ಸುಪ್ರೀಂಕೋರ್ಟ್ (Supremecourt) ನಲ್ಲಿ ಇದೆ. ಸುಪ್ರೀಂಕೋರ್ಟ್‍ನಲ್ಲಿ ಏನ್ ಆಗುತ್ತೆ ಅದಕ್ಕೆ ಎಲ್ಲರೂ ಒಪ್ಪಬೇಕಾಗುತ್ತೆ. ಬಿಜೆಪಿ ಬೆಂಬಲಿಸುವಂತೆ ಎಂಇಎಸ್‍ನಲ್ಲಿ ಮನವಿ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಸೇರ್ಪಡೆಯಾಗದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರಾ ಕೆಜಿಎಫ್ ಶಾಸಕಿ?
Advertisement
ಕಳೆದ 5 ವರ್ಷದಲ್ಲಿ ಗ್ರಾಮೀಣ ಕ್ಷೇತ್ರ ಕೆಡಿಸಿದ ಮಹಾನಾಯಕಿಯನ್ನು ಮನೆಗೆ ಕಳಿಸಿ. ಒಬ್ಬ ಸಂಭಾಯಿತ ಒಳ್ಳೆಯ ಮನುಷ್ಯನ ಎಂಎಲ್‍ಎ ಮಾಡಿ. ಕಮಿಷನ್ ಏಜೆಂಟರ ಹಿಂದೆ ಬೀಳದೇ ಬಡವರ ಸೇವೆ ಮಾಡೋ ಎಂಎಲ್‍ಎ ಆರಿಸಿ ತರೋಣ ಅಂದಿದ್ದಾರೆ. ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ಬಿಜೆಪಿ (BJP) ವರಿಷ್ಠರು ಯಾರಿಗೆ ಟಿಕೆಟ್ ನೀಡ್ತಾರೆ ಅವರನ್ನು ಆರಿಸಿ ತರೋಣ. ನನ್ನ ಮೇಲೆ ಪ್ರೀತಿ ಹೀಗೆ ಇರಲಿ ಎಂದು ರಮೇಶ್ ಜಾರಕಿಹೊಳಿ ಕೋರಿದ್ದಾರೆ.
ರಾಜಹಂಸಘಡದಲ್ಲಿರುವ ಛತ್ರಪತಿ ಶಿವಾಜಿ ಲೋಕಾರ್ಪಣೆ ಮಾರ್ಚ್ 2 ರಂದು ನಡೆಯಲಿದೆ. ಮುಖ್ಯಮಂತ್ರಿ ಆದಿಯಾಗಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯತ್ನದಿಂದ ಶಿವಾಜಿ ಮೂರ್ತಿ ನಿರ್ಮಾಣವಾದರೂ ಕ್ರೆಡಿಟ್ ವಿಚಾರವಾಗಿ ಕೈ-ಕಮಲ ನಾಯಕರು ಕಚ್ಚಾಡುತ್ತಿದ್ದಾರೆ.