ಮೈಸೂರು: ಈ ಬಾರಿ ನನ್ನ ನೇತೃತ್ವದಲ್ಲೇ 2018ರ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತಾನಡಿದ ಅವರು, ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಆದರೆ ಈ ಬಾರಿ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇದನ್ನು ಹೈಕಮಾಂಡ್ ಲಿಖಿತ ರೂಪದಲ್ಲಿ ಹೇಳಿದೆ. ಈ ರೀತಿ ಹೇಳಿದೆ ಅಂದರೆ ನನ್ನ ಮೇಲೆ ಅವರಿಗೆ ಒಲವು ಹೆಚ್ಚಿದೆ ಅನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಕಾರ್ಯಾಕ್ರಮದಲ್ಲಿ ಎಲ್ಲರ ಮುಂದೆ ಹೇಳಿದರು.
Advertisement
ಸಿಎಂ ಇಷ್ಟರ ಮಟ್ಟಿಗೆ ಹೇಳಿದ್ದಾರೆ ಅಂದರೆ ತಮ್ಮ ಪಕ್ಷದ ಅಧ್ಯಕ್ಷರು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವ ಅರ್ಥದಲ್ಲಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಸಿಎಂ ಅವರ ಈ ಮಾತನ್ನು ಕೇಳುತ್ತಿದ್ದಂತೆ ಕಾರ್ಯಕರ್ತರ ಸಭೆ ಕರತಡನವಾಯಿತು. ಎಲ್ಲರು ಅದರಲ್ಲೂ ನಮ್ಮ ಸಮುದಾಯದವರಾದ ಶಾಸಕ ಎಚ್.ಪಿ. ಮಂಜುನಾಥ್‍ಗೆ ಬೆಂಬಲ ಕೊಡಬೇಕು ಎಂದರು.
Advertisement
ಇದೇ ವೇಳೆ ಯಾರೇ ಬಂದು ನನ್ನ ವಿರುದ್ಧ ಏನೇ ಹೇಳಿದರೂ ಅದನ್ನು ಕೇಳಬೇಡಿ ಎಂದು ಹುಣಸೂರು ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಗೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಮುಂದೆ ಟಾಂಗ್ ನೀಡಿದರು,
Advertisement
ವಿಶ್ವನಾಥ್ ವಾಗ್ದಾಳಿ: ತುಮಕೂರಿನಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್ ಸಿಎಂ ಮಾತಿಗೆ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರದು ದರ್ಪ ಹಾಗೂ ದುರಹಂಕಾರದ ಪರಮಾವಧಿ. ಕುರುಬರಿಗೆ ಮತಹಾಕದಂತೆ ಹೇಳಲು ಸಿದ್ದರಾಮಯ್ಯ ಏನು ಕುರುಬರ ಮಾಲೀಕನಲ್ಲ ಅಥವಾ ಕುರುಬರು ಅವರು ಸ್ವತ್ತಲ್ಲ ಎಂದು ಖಾರವಾಗಿ ನುಡಿದಿದ್ದಾರೆ. ಸಿಎಂ ಅವರಿಗೆ ಜನತಂತ್ರ ವ್ಯವಸ್ಥೆಯಲ್ಲಿ ದುಡ್ಡಿಗೆ, ದರ್ಪಕ್ಕೆ ಮತ್ತು ಅಹಂಕಾರಕ್ಕೆ ಅವಕಾಶವಿಲ್ಲ. ಕೇವಲ ನಿಷ್ಠೆ ಹಾಗೂ ಸೇವೆಗೆ ಮಾತ್ರ ಅವಕಾಶ ಎಂದು ಸಿಎಂಗೆ ತಿರಗೇಟು ನೀಡಿದ್ದಾರೆ.
Advertisement