ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಏರಿಳಿತ ಆಗುತ್ತಿದೆ. ಇಂದು 41,400 ಹೊಸ ಪ್ರಕರಣಗಳು ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ.
Advertisement
ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಇಂದು 53,093 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 3,50,742 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿಂದು 52 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್
Advertisement
Discharges exceed new cases for the first time in third wave:
◾New cases in State: 41,400
◾New cases in B'lore: 19,105
◾Positivity rate in State: 26.70%
◾Discharges: 53,093
◾Active cases State: 3,50,742 (B'lore- 212k)
◾Deaths:52 (B'lore- 19)
◾Tests: 1,55,054#COVID19
— Dr Sudhakar K (@mla_sudhakar) January 25, 2022
Advertisement
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 19,105 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 19 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ನಗರದಲ್ಲಿ 212 ಸಾವಿರ ಸಕ್ರಿಯ ಪ್ರಕರಣಗಳಿವೆ ಎಂದು ಟ್ವಿಟ್ಟರ್‌ನಲ್ಲಿ ವಿವರಿಸಿದ್ದಾರೆ.
Advertisement
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.26.70 ಇದೆ. ಕಳೆದ 24 ಗಂಟೆಗಳಲ್ಲಿ 1,55,054 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 402, ಬಳ್ಳಾರಿ 775, ಬೆಳಗಾವಿ 977, ಬೆಂಗಳೂರು ಗ್ರಾಮಾಂತರ 958, ಬೆಂಗಳೂರು ನಗರ 19,105, ಬೀದರ್ 403, ಚಾಮರಾಜನಗರ 589, ಚಿಕ್ಕಬಳ್ಳಾಪುರ 915, ಚಿಕ್ಕಮಗಳೂರು 244, ಚಿತ್ರದುರ್ಗ 649, ದಕ್ಷಿಣ ಕನ್ನಡ 667, ದಾವಣಗೆರೆ 403, ಧಾರವಾಡ 1,511, ಗದಗ 168, ಹಾಸನ 1,381, ಹಾವೇರಿ 164, ಕಲಬುರಗಿ 573, ಕೊಡಗು 389, ಕೋಲಾರ 2,185, ಕೊಪ್ಪಳ 310, ಮಂಡ್ಯ 1,495, ಮೈಸೂರು 1,494, ರಾಯಚೂರು 214, ರಾಮನಗರ 242, ಶಿವಮೊಗ್ಗ 494, ತುಮಕೂರು 2,026, ಉಡುಪಿ 1,202, ಉತ್ತರ ಕನ್ನಡ 1,007, ವಿಜಯಪುರ 333 ಮತ್ತು ಯಾದಗಿರಿಯಲ್ಲಿ 125 ಪಾಸಿಟಿವ್ ಪ್ರಕರಣ ದಾಖಲಾಗಿದೆ.