ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, 92 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕು ಸುಧಾರಿಸುತ್ತಿರುವ ವೇಳೆ ಈ ವಾರದಲ್ಲಿ ಸೋಂಕಿನಿಂದ ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಕೊರೊನಾ ಮುನ್ನೆಚರಿಕೆ ಕ್ರಮಗಳ ಕಡೆ ಹೆಚ್ಚು ಗಮನ ಹರಿಸಿದೆ. ಇಂದು 17,273 ಜನರು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. ಇಂದು 112 ಮಂದಿಗೆ ಸೋಂಕು ತಗುಲಿದೆ.
ಇಲ್ಲಿವರೆಗೂ 40,062 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. 0.64% ಸೋಂಕು ಪ್ರಮಾಣ ಇದೆ. 0.89% ಮರಣ ಪ್ರಮಾಣ ದಾಖಲಾಗಿದೆ. ರಾಜ್ಯದಲ್ಲಿ ಇಂದು 7,576 ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒಟ್ಟು 17,273 ಸ್ಯಾಂಪಲ್ (ಆರ್‌ಟಿಪಿಸಿಆರ್ 13,538 + 3,735 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ‘ನಮ್ಮ ಮನೆ’ ಎಕ್ಸ್ ಪೋ 4 ನೇ ಆವೃತ್ತಿಗೆ ತೆರೆ
ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಬಳ್ಳಾರಿ 01, ಬೆಂಗಳೂರು ನಗರ 89, ಚಿತ್ರದುರ್ಗ 01, ದ.ಕನ್ನಡ 05, ಕಲಬುರಗಿ 01, ಮೈಸೂರು 13, ತುಮಕೂರಿನ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 23 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ.