ಮುಖ್ಯಮಂತ್ರಿಗಳ 1 ಲಕ್ಷ ಮನೆ ಯೋಜನೆಗೆ ಬಿಎಸ್‍ವೈ ಶಂಕುಸ್ಥಾಪನೆ

Public TV
1 Min Read
yediyurpppa dv sadanada gowda r ashok somanna

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ಕಟ್ಟಡ ಯೋಜನೆಗೆ ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಶಂಕು ಸ್ಥಾಪನೆ ಮಾಡಿದರು. ಬೆಂಗಳೂರಿನಲ್ಲಿ ಬಡವರಿಗಾಗಿ ಮನೆ ನಿರ್ಮಾಣ ಮಾಡುವ ಯೋಜನೆ ಇದಾಗಿದ್ದು, ಮುಂದಿನ ವರ್ಷದ ವೇಳೆಗೆ ಫಲಾನುಭವಿಗಳಿಗೆ ಮನೆಗಳು ಲಭ್ಯವಾಗಲಿದೆ.

ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗಾಣಿಗರಹಳ್ಳಿಯ ಸರ್ವೆ ನಂಬರ್ 74 ರಲ್ಲಿ ಸುಮಾರು 932 ಬಹುಮಹಡಿ ಮನೆಗಳಿಗೆ ಶಂಕು ಸ್ಥಾಪನೆ ಮಾಡಲಾಯ್ತು. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ, ಬಡವರಿಗಾಗಿ ಸೂರು ನೀಡುವ ಯೋಜನೆ ಇದಾಗಿದೆ. ಕಡಿಮೆ ಹಣದಲ್ಲಿ ಮನೆಗಳನ್ನ ಬಡವರಿಗೆ ಈ ಯೋಜನೆಯಲ್ಲಿ ನೀಡಲಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ಘೋಷಣೆ ಮಾಡಿದ್ದರು. ಬೆಂಗಳೂರಿನ ಹಲವೆಡೆ ಜಾಗಗಳನ್ನ ಗುರುತಿಸಿ ಅಲ್ಲಿ ನಿರ್ಮಾಣ ಮಾಡಿ ಬಡವರಿಗೆ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ 4-5 ಕಡೆ ಮನೆಗಳ ನಿರ್ಮಾಣ ಕೆಲಸ ಪ್ರಾರಂಭವಾಗಿದ್ದು, ಮೊದಲ ಹಂತದ ಮನೆಗಳು ಇನ್ನೊಂದು ವರ್ಷದಲ್ಲಿ ಪೂರ್ಣವಾಗುವ ಸಾಧ್ಯತೆಇದೆ.

ಶಂಕು ಸ್ಥಾಪನೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಬಡವರಿಗೆ ಮನೆ ಕಟ್ಟಿಕೊಡುತ್ತಿದ್ದೇವೆ. ಎಲ್ಲಾ ಬಡವರಿಗೂ ಮನೆ ಕೊಡ್ತೀವಿ ಅಂತ ತಿಳಿಸಿದರು. ಬೆಂಗಳೂರಿನಲ್ಲಿ ಸರ್ಕಾರ ಭೂಮಿ ಅನೇಕ ಕಡೆ ಒತ್ತುವರಿ ಆಗಿದೆ. ಒತ್ತುವರಿ ಆಗಿರುವ ಜಾಗವನ್ನು ತೆರವು ಮಾಡಿ ಅಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *