ನವದೆಹಲಿ: ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಎಲ್ಲ ಪಕ್ಷಗಳು ಹೇಳುತ್ತವೆ. ಆದರೆ ಈ ತನಕ ಸರಿಯಾಗಿ ಪ್ರಯತ್ನ ಆಗಿರಲಿಲ್ಲ, ʻಒನ್ ನೇಷನ್ ಒನ್ ಎಲೆಕ್ಷನ್ʼ ಮಸೂದೆ (One Nation One Election Bill) ತರುವ ಮೂಲಕ ಮೋದಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗರ್ತಾಹ ಬೆಳವಣಿಗೆ ಎಂದು ಸಂಸದ ಸಂಸದ ಜಗದೀಶ್ ಶೆಟ್ಟರ್ “(Jagadish Shettar) ಹೇಳಿದ್ದಾರೆ.
ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯ ಅಗತ್ಯವಿದೆ. ಇದರಿಂದ ಸಮಯದ ಉಳಿತಾಯಯಾಗಲಿದೆ, ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ವಿರೋಧ ಪಕ್ಷಗಳು ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿವೆ. ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂದಿದ್ದಾರೆ. ಇದನ್ನೂ ಓದಿ: 20 ದಿನದ ಮಗು ಕೊಲ್ಲುವುದಾಗಿ ಬೆದರಿಕೆ – ಪತ್ನಿಯ ಸಹೋದರರಿಂದಲೇ ಪತಿ ಹತ್ಯೆ
Advertisement
Advertisement
ಈ ಮಸೂದೆ ಜಾರಿಯಾದರೆ ಎರಡೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಒಂದನೇ ಹಂತದಲ್ಲಿ ಲೋಕಸಭೆ ಹಾಗು ವಿಧಾನಸಭಾ ಚುನಾವಣೆ, ಎರಡನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಡೆಯಲಿದೆ. ನಮ್ಮ ಗಮನ ಪೂರ್ತಿ ಚುನಾವಣೆ ಮೇಲೆ ಇರುತ್ತೆ, ಅಭಿವೃದ್ಧಿಗೆ ಸಮಯ ಇರೋದೇ ಇಲ್ಲ ಇದರಿಂದ ಭವಿಷ್ಯದಲ್ಲಿ ಅಭಿವೃದ್ಧಿಗೆ ಸಮಯ ಸಿಗಲಿದೆ ಎಂದರು.
Advertisement
ಹೊಸ ಚುನಾವಣಾ ವ್ಯವಸ್ಥೆಯಿಂದ ರಾಜ್ಯಗಳಿಗೆ, ಇತರೆ ಪಕ್ಷಗಳಿಗೆ ಅನ್ಯಾಯವಾಗುವುದಿಲ್ಲ, ಮತದಾರರು ದಡ್ಡರಲ್ಲ ಯಾವ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಅನ್ನೋದು ಅವರಿಗೆ ಗೊತ್ತಿದೆ, ಹಿಂದೆ ಒಟ್ಟಿಗೆ ಚುನಾವಣೆ ನಡೆದರು ಜನರ ತೀರ್ಪು ಬೇರೆ ಬೇರೆಯಾಗಿ ಬಂದಿದೆ ವಿಪಕ್ಷಗಳ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಸ್ಟೋರ್ ಮಾಡಲಾಗಿದ್ದ 24 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!
Advertisement
ಸಂಸದ ಗೋವಿಂದ್ ಕಾರಜೋಳ ಪ್ರತಿಕ್ರಿಯಿಸಿ, ಇದು ದೂರದೃಷ್ಟಿ ಕಲ್ಪನೆಯಿಂದ ತಂದಿರುವ ಬಿಲ್, ಚುನಾವಣೆ ಪಾವಿತ್ರ್ಯತೆ ಕಾಪಾಡಲು ತರಲಾಗಿದೆ. ಯಾರಿಗೆ ತೋಳಬಲ, ಹಣ ಬಲ, ಜಾತಿ ಬಲ ಇದೆ ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಇದು ಅಪಾಯಕಾರಿ ಬೆಳವಣಿಗೆ, ಸಮಾಜಸೇವೆ ಮಾಡುವ ಜನರಿಗೆ ಚುನಾವಣೆ ವ್ಯವಸ್ಥೆಯಲ್ಲಿ ಗೆಲ್ಲಬೇಕಿದೆ. ಆದರೆ ಇಂದು ಚುನಾವಣೆ ವ್ಯವಸ್ಥೆ ಕಲುಷಿತಗೊಂಡಿದೆ ಈ ಬಿಲ್ ಅನ್ನು ಎಲ್ಲರೂ ಒಪ್ಪಬೇಕು, ಪಾಸ್ ಮಾಡಬೇಕು ಎಂದರು.
ಸಂಸದ ಈರಣ್ಣ ಕಡಾಡಿ ಮಾತನಾಡಿ, ಒಂದೇ ಚುನಾವಣೆಯಿಂದ ಪ್ರಜಾತಂತ್ರ ಗಟ್ಟಿಗೊಳ್ಳಲಿದೆ, ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಮೋದಿ ಸರಕಾರದ ಐತಿಹಾಸಿಕ ನಿರ್ಧಾರ ಮಾಡಿದೆ. ಒಂದೆ ಬಾರಿ ಚುನಾವಣೆಯಿಂದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಇದನ್ನೂ ಓದಿ: ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್