ಬೆಳಗಾವಿ: ನಾವು ಹಿಂದೂಗಳೇ (Hindu), ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ. ಬಿಜೆಪಿಯವರದ್ದು ನಾಟಕ. ಒಳಗಿನಿಂದ ನಮ್ಮಲ್ಲಿ ಹಿಂದುತ್ವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಿಂದುತ್ವದ ಜಪ ಮಾಡಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Karnataka Assembly Winter Session) ಸಾವರ್ಕರ್ ಬಿಸಿ ಜೋರಾಗಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಇಂದಿನಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಬೆಳಗಾವಿ ಸುವರ್ಣಸೌಧದಲ್ಲಿ (Suvarna Soudha) ಮೊದಲ ದಿನದಿಂದಲೇ ಹಿಂದುತ್ವ ವಿಚಾರವೇ ಹೆಚ್ಚು ಪ್ರತಿಧ್ವನಿಸುವ ಮುನ್ಸೂಚನೆ ಸಿಕ್ಕಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸಾವರ್ಕರ್ ಸೇರಿ 7 ಮಂದಿ ಫೋಟೋ ಅನಾವರಣ
ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಸ್ಪೀಕರ್ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನಿಯರ ಫೋಟೋ ಹಾಕ್ತೀವಿ ಅಂತ ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ (Savarkar) ಫೋಟೋ ಹಾಕೋದು ಗೊತ್ತಾಯಿತು. ಸಾವರ್ಕರ್‌ಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಸಾವರ್ಕರ್ ವಿವಾದಾತ್ಮಕ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು. ಇದೀಗ ಬಿಜೆಪಿ ಅಧಿವೇಶನಕ್ಕೆ ಅಡ್ಡಿ ತರಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್
ಫೋಟೋ ವಿಚಾರವಾಗಿ ನನಗೆ ಗೊತ್ತೆ ಇಲ್ಲಾ ಅಂತ ಮುಖ್ಯಮಂತ್ರಿಗಳು ಹೇಳಿದ್ರು. ಅವರು ಸುಳ್ಳಿನ ರಾಜ. ಮುಖ್ಯಮಂತ್ರಿಗಳಿಗೆ ಸುಳ್ಳಿನ ರಾಜ ಅಂತ ಕರೆಯಬೇಕಾಗುತ್ತೆ. ಸ್ವಾತಂತ್ರಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದರು. ಅವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು. ಕಮೀಷನ್, ಮತದಾರರ ಪಟ್ಟಿ ಹಗರಣ ಯಾವುದೂ ಚರ್ಚೆ ಆಗಬಾರದು ಅಂತ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.